🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಶ್ರೀ ಸರ್ವಜ್ಞೇಂದ್ರ ದಶಕ






ಜಯತು ಗುರುವರ ಜಯತು ಗುರುವರ ಜಯತು ಗುರುವರ ಪಾಹಿಮಾಂ|
ಜಯತು ಸರ್ವಜ್ಞೇಂದ್ರ ಯತಿವರ ಜಯತು ಗುರುವರ ರಕ್ಷಮಾಂ ||ಪ||

ಬಾಲ್ಯದೊಳು ಸನ್ಯಾಸ ದೀಕ್ಷೆಯ ವೀಳ್ಯವನು ನೀ ಪಡೆಯುತ |
ಬಾಲಪಾಠಗಳೆಲ್ಲ ಚೆಂದದಿ ವೇಳೆಕಳೆಯದೆ ಕಲಿಯುತ||
ಸ್ವರ್ಣವಲ್ಲಿಯ ಮಠದಿ ಹರಿಹರರರ್ಚನೆಯ ನೀ ಗೈಯ್ಯುತ|||
ರಾಜಿಸಿದ ಶ್ರೀ ಸರ್ವಜ್ಞೇಂದ್ರ ಯತೀಂದ್ರ ಗುರುವರ ಪಾಹಿಮಾಂ||೧||

ವೇದ ಶಾಸ್ತ್ರಾಧ್ಯಯನ ಮುಗಿಯಿಸಿ ಕಾವ್ಯ ನಾಟಕವರಿತು ನೀ|
ಉಪನಿಷತ್ ವೇದಾಂತ ಸೂತ್ರಾದಿಗಳ ಮರ್ಮವ ತಿಳಿದುನೀ||
ಧರಿಸಿರುವ ಶ್ರೀ ಸರ್ವಜ್ಞೇಂದ್ರ ಸರಸ್ವತೀಯೆಂಬೆಸರನು|||
ಸಾರ್ಥಕವ ಗೊಳಿಸಿರುವ ಸರಸ್ವತಿ ಸ್ವಾಮಿ ಗುರುವರ ರಕ್ಷಮಾಂ||೨||

ಮೆರೆವ ಮೈಸೂರ್ ರಾಜರಾಶ್ರಯದೊಳಗಿರುವ ಶ್ರೀ ಕೂಳ್ಲಿಯ|
ವಾಲುಕೇಶ್ವರ ಸ್ವಾಮಿಯಿಂದಲಿ ಮಾಘ ಪಂಚಮಿ ದಿನದಲಿ||
ಪಡೆದು ಉಪದೇಶವನು ಶ್ರೀ ಚಕ್ರಾರ್ಚನೆಯನತಿ ನಿಯಮದಿ|||
ಅರ್ಚಿಸುತ ಜನರಿಷ್ಟ ನೀಡಿದ ಶ್ರೇಷ್ಠ ಗುರುವರ ಪಾಹಿಮಾಂ||೩||

ಅತ್ರಿಯಲಿ ಶ್ರೀ ಚಕ್ರ ಪೂಜೆಯ ಶುಕ್ರವಾರದ ದಿನದಲಿ|
ಅರ್ಚಿಸುತ ಶ್ರೀ ಮಠದಿ ನೆಡೆಯುವ ನಿತ್ಯನೈಮಿತ್ಯಗಳನು||
ನಿಷ್ಠೆಯಲಿ ನೆಡೆಸುತಲಿ ಷೋಡಷ ಸೀಮೆಯೊಳಗಿನ ಭಕ್ತರ|||
ಸೇವೆಪಡೆದಾದರದಿ ನಡೆದಿಹ ಸ್ವಾಮಿ ಗುರುವರ ರಕ್ಷಮಾಂ||೪||

ಬರಲು ಅಷ್ಟಗ್ರಹವು ಮಹದನಿಷ್ಟವೆಂದು ನಿ ತಿಳಿಯುತ|
ದೇಶ ಕಲ್ಯಾಣಾರ್ಥ ಶ್ರೀ ಲಲಿತಾಶ್ರಯದಲತಿ ವಿಭವದಿ||
ಶಿಷ್ಯರೊಡಗೂಡತುಲ ವೈಭವಯುಕ್ತದಿಂದಲಿ ದೇವಿಯ|||
ಸಹಸ್ರ ಚಂಡೀ ಯಾಗ ನಡೆಸಿದ ದೇವ ಗುರುವರ ಪಾಹಿಮಾಂ||೫||

ಭಕ್ತರಿಷ್ಟವ ಪಡೆದು ನೀನತಿಶ್ರೇಷ್ಠ ಕಾಶೀ ಯಾತ್ರೆಯ|
ನೆವದಿ ಸದ್ಧರ್ಮೋಪದೇಶವ ಮಾಡಿ ಕೀರ್ತಿಯ ಗಳಿಸಿದೆ||
ತಂದು ಬಾಗೀರಥಿಯ ಮಹದಭಿಷೇಕದಿಂದಲಿ ಪೂಜೆಯ|||
ಮಾಡಿಸಂತರ್ಪಣೆಯ ನೆಡೆಸಿದ ದೇವ ಗುರುವರ ರಕ್ಷಮಾಂ||೬||

ಧರ್ಮವನು ಸ್ಥಿರಗೊಳಿಸಲೋಸುಗ ಧರ್ಮದೇವನೆ ಉದಿಸಿದೆ|
ಧರ್ಮರಕ್ಷೆಗೆ ವೇದಸಂಸ್ಕೃತ ಪಾಠಶಾಲೆಯ ರಚಿಸಿದೆ||
ಶಿಷ್ಯರಿಗೆ ಸದ್ಧರ್ಮ ಬೋಧೆಯ ಶ್ರದ್ಧೆಯಿಂದಲಿ ಮಾಡಿದೆ|||
ಧರ್ಮವನು ಸ್ಥಿರಗೊಳಿಸಿ ಮೆರೆದಿಹ ಸ್ವಾಮಿ ಗುರುವರ ಪಾಹಿಮಾಂ||೭||

ಜಗವು ದೈವಾಧೀನವೆಂಬುದ ಜನಕೆ ನೀನದ ತಿಳಿಸಿದೆ|
ದೈವ ಮಂತ್ರಾಧೀನವೆಂಬುವ ಮರ್ಮವನು ನೀ ನರುಹಿದೆ||
ದೇವತಾ ಶಕ್ತಿಯಲಿ ಶ್ರೀಮಠದೇಳಿಗೆಯ ನೀ ಮಾಡಿದೆ|||
ದೈವಲೀಲೆಯ ತೋರಿಮೆರೆದಿಹ ದೇವ ಗುರುವರ ರಕ್ಷಮಾಂ||೮||

ಮಾಸ ವೈಶಾಖ್ ಶುಕ್ಲ ಚೌತೀ ದಿನದಿ ನೀನವತರಿಸಿದೆ|
ನೀತಿ ಎಂದೀಯೆಲ್ಲ ಕಾರ್ಯವ  ತೂರದಿಂದಲಿ ಮಾಡಿದೆ||
ಮಾರ್ಗಶೀರ್ಷದ ಶುದ್ದ ಚೌತೀ ಪ್ರಮೋದ ಸಂವತ್ಸರದಲೀ|||
ಸಿದ್ಧಿಹೊಂದಿದ ಶ್ರೇಷ್ಠ ಸರ್ವಜ್ಞೇಂದ್ರ ಗುರುವರ ಪಾಹಿಮಾಂ||೯||

ಸುದ್ದಿತಿಳಿದಾ ಶಿಷ್ಯವೃಂದವು ದುಃಖದಿಂದಲಿ ಬಂದತಿ-|
ಭಕ್ತಿಯಿಂದಲಿ ನಮನ ಶ್ರದ್ಧಾಂಜಲಿಯನರ್ಪಿಸಿ ನಿಂದತಿ-||
ಶ್ರದ್ಧೆಯಿಂದಿರೆ ಶುದ್ದದ ಕರ್ಮವ ಮಾಡಿ ದ್ವಿಜರೂ ಇದಕಿಹ|||
ಸಿದ್ಧ ಬದ್ಧ ಸಮಾಧಿಸ್ಥಳದೊಳಗಿದ್ದ ಗುರುವರ ರಕ್ಷಮಾಂ||೧೦||

ರಚನೆ: ಆಚಾರ್ಯ ಗಂಗಾಧರ ಪರಂ ಭಟ್ಟ ಕಿಚ್ಚೀಕೇರಿ