🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಶ್ರೀಮದ್ಗಂಗಾಧರೇಂದ್ರಾಷ್ಟಕಮ್



ಜ್ಯೇಷ್ಠೇ ಶುದ್ಧೇ ನವಮ್ಯಾಂ ಭುವನಮಲಮಪಾಕರ್ತುಮೇವಾಪ್ತಜನ್ಮಾ

ಸಂಸ್ಕಾರಾನ್ ಪ್ರಾಪ್ಯ ಕಾಲೇ ನಿಜಕುಲವಿಹಿತಾನ್ ಶುದ್ಧಭಾವೈರ್ವಿವೇಕೀ

ತತ್ತ್ವಂ ವೇದಾಂತಸಿದ್ಧಂ ಕರಗತಮಕರೋತ್ ಪ್ರಜ್ಞಯಾಭಿಜ್ಞಯಾಸೌ

ಶ್ರೀಮದ್ಗಂಗಾಧರೇಂದ್ರೋ ಜಯತಿ ಯತಿವರಃ ಶಾಂಕರಾದ್ವೈತದರ್ಶೀ ॥೧॥

  ಭೂಮಿಯಮೇಲಿನ ಸರ್ವವಿಧವಾದ ಕೊಳಕನ್ನು ತೊಳೆಯುವುದಕ್ಕೋಸ್ಕರ ಜ್ಯೇಷ್ಠಮಾಸದ ಶುಕ್ಲಪಕ್ಷದ ನವಮಿಯ ತಿಥಿಯಂದು ಸತ್ಕುಲದಲ್ಲಿ ಜನಿಸಿ ಕಾಲಕಾಲಕ್ಕೆ ಯೋಗ್ಯವಾದ ಕುಲಕ್ಕನುಸಾರವಾದ ಸಂಸ್ಕಾರಗಳನ್ನು ನಿರ್ಮಲಮನಸ್ಸಿನಿಂದ ಪಡೆದು ತನ್ನ ತೀಕ್ಷ್ಣಬುದ್ಧಿಯಿಂದ ವೇದಾಂತಶಾಸ್ತ್ರದ ತತ್ತ್ವವನ್ನು ವಿವೇಕಬುದ್ಧಿಯಿಂದ ಕರಗತಮಾಡಿಕೊಂಡ ಶಾಂಕರಾದ್ವೈತದರ್ಶನವನ್ನು ಪಡೆದ ಯತಿಶ್ರೇಷ್ಠರಾದ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸರ್ವಶ್ರೇಷ್ಠರಾಗಿ ಕಂಗೊಳಿಸುತ್ತಿದ್ದಾರೆ.

ಬಾಲ್ಯಾದೇವಾತಿಮಾತ್ರಂ ಸಮುದಿತವಿರತೇರ್ಭಾವತಸ್ಸ್ವಾಂ ಮನೀಷಾಂ

ಸಂನ್ಯಾಸೇ ನಿಶ್ಚಿಚಾಯ ಪ್ರಶಮಿತಹೃದಯೋ ಲೋಕಕಾರುಣ್ಯಮೂರ್ತಿಃ

ಲಬ್ಧ್ವಾ ಶ್ರೀಸ್ವರ್ಣವಲ್ಲೀಮಠಪತಿಪದವೀಂ ಯೌವನೇऽಧ್ಯಾತ್ಮಸಕ್ತಃ

ಶ್ರೀಮದ್ಗಂಗಾಧರೇಂದ್ರೋ ಜಯತಿ ಯತಿವರಃ ಶಾಂಕರಾದ್ವೈತದರ್ಶೀ ॥೨॥

ಬಾಲ್ಯದಲ್ಲಿಯೇ ಗಾಢವಾಗಿ ಉಂಟಾದ ವೈರಾಗ್ಯದಿಂದ ತನ್ನ ಮನಸ್ಸನ್ನು ಸಂನ್ಯಾಸಾಶ್ರಮಕ್ಕೋಸ್ಕರ ನಿಶ್ಚಯಿಸಿಕೊಂಡು, ಶಾಂತವಾದ ಮನಸ್ಸಿನಿಂದ ಚಿರಯೌವನದಲ್ಲಿಯೇ ಅಧ್ಯಾತ್ಮದಲ್ಲಿ ಆಸಕ್ತರಾಗಿ ಸ್ವರ್ಣವಲ್ಲೀಮಠದ ಪೀಠಾಧೀಶ್ವರತ್ವವನ್ನು ಹೊಂದಿ, ಲೋಕದ ಎಲ್ಲ ಜೀವಿಗಳಲ್ಲಿಯೂ ಕರುಣೆಯನ್ನು ತೋರುವ ಶಾಂಕರಾದ್ವೈತದರ್ಶನವನ್ನು ಪಡೆದ ಯತಿಶ್ರೇಷ್ಠರಾದ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸರ್ವಶ್ರೇಷ್ಠರಾಗಿ ಕಂಗೊಳಿಸುತ್ತಿದ್ದಾರೆ.

ಪೀಠೇऽಲಂಕೃತ್ಯ ಕೃತ್ಯಂ ಸಕಲಮಪಿ ಮುದಾ ಸಂಪ್ರದಾಯಾದವಾಪ್ತಂ

ಸರ್ವಜ್ಞೇಂದ್ರೈರ್ನಿರೂಢಾಮಪಚಿತಿಮತುಲಾಂ ಚಾಧರದ್ದೇಶಿಕೇಂದ್ರಃ

ಧರ್ಮಾನ್ ಸಂನ್ಯಾಸಿಚರ್ಯಾನನಿತರಸುಲಭಾಂಲ್ಲೀಲಯಾಸೇವಮಾನಃ

ಶ್ರೀಮದ್ಗಂಗಾಧರೇಂದ್ರೋ ಜಯತಿ ಯತಿವರಃ ಶಾಂಕರಾದ್ವೈತದರ್ಶೀ ॥೩॥

ಶ್ರೀಮಠದ ಪೀಠವನ್ನು ಅಲಂಕರಿಸಿ ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯಗಳನ್ನು ಮತ್ತು ಪರಮಗುರುಗಳಾದ ಸರ್ವಜ್ಞೇಂದ್ರರಿಂದ ನಿರ್ವಹಿಸಲ್ಪಟ್ಟ ಅನುಪಮವಾದ ಸರ್ವವಿಧ ಪೂಜಾ ಕೈಂಕರ್ಯಗಳನ್ನು ಸಂತೋಷದಿಂದ ವಹಿಸಿಕೊಂಡು, ಸಂನ್ಯಾಸಿಯಿಂದ ಆಚರಿಸಲ್ಪಡಬೇಕಾದ ಇತರರಿಗೆ ಅತಿಕಷ್ಟಸಾಧ್ಯವಾದ ಎಲ್ಲ ಧರ್ಮಗಳನ್ನು ಸಹಜವೆಂಬಂತೆ ಸೇವಿಸುತ್ತಿರುವ ಶಾಂಕರಾದ್ವೈತದರ್ಶನವನ್ನು ಪಡೆದ ಯತಿಶ್ರೇಷ್ಠರಾದ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸರ್ವಶ್ರೇಷ್ಠರಾಗಿ ಕಂಗೊಳಿಸುತ್ತಿದ್ದಾರೆ.

ಕ್ಷೇಮಾರ್ಥಂ ಜೀವರಾಶೇಸ್ತರುಕುಲನಿಖಿಲಾರಕ್ಷಣೇ ದತ್ತಚಿತ್ತಃ

ತದ್ಯೋಗ್ಯಂ ಕಾರ್ಯಭಾರಂ ನಿರವಹದಚಲಸ್ಸನ್ನಯಂ ಕರ್ಮಯೋಗೀ

ಜೀವೇಲ್ಲೋಕಸ್ಸಮಸ್ತೋ ನಿರತಿಶಯಸುಖೇನೇತಿ ಶಶ್ವದ್ಬ್ರುವಾಣಃ

ಶ್ರೀಮದ್ಗಂಗಾಧರೇಂದ್ರೋ ಜಯತಿ ಯತಿವರಃ ಶಾಂಕರಾದ್ವೈತದರ್ಶೀ ॥೪॥

ಸಕಲ ಜೀವರಾಶಿಗಳ ಕ್ಷೇಮಕ್ಕೋಸ್ಕರ ವನಸಿರಿಯ ಪಾಲನೆಯಲ್ಲಿ ಸದಾ ಮಗ್ನರಾಗಿ ತಮ್ಮ ಸುತ್ತಲಿನ ಪ್ರಕೃತಿಯ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡು ಹೋರಾಟವನ್ನು ಸಮರ್ಥವಾಗಿ ನಿರ್ವಹಿಸಿ ನಿಜಾರ್ಥದಲ್ಲಿ ಕರ್ಮಯೋಗಿಯಾಗಿರುವ, ಯಾವಾಗಲೂ ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂದು ಪುನರುಚ್ಚರಿಸುತ್ತಾ ಎಲ್ಲ ಜನರ ಸುಖವನ್ನು ಬಯಸುವ ಶಾಂಕರಾದ್ವೈತದರ್ಶನವನ್ನು ಪಡೆದ ಯತಿಶ್ರೇಷ್ಠರಾದ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸರ್ವಶ್ರೇಷ್ಠರಾಗಿ ಕಂಗೊಳಿಸುತ್ತಿದ್ದಾರೆ.

ಸಂಸಾರಾಬ್ಧೌ ನಿಮಜ್ಜಜ್ಜಗದಿದಮತನುಕ್ಲೇಶಯಾದೋऽದ್ಯಮಾನಂ

ಗೀತಾಶಾಸ್ತ್ರೋಡುಪೇನೋನ್ನಯತಿ ಜಡಮತಿಂ ಸದ್ವಿವೇಕಾಖ್ಯಪಾರಮ್

ಸ್ವಸ್ಥಂ ಕರ್ತುಂ ಸಮಾಜಂ ವ್ಯಸನವಿರಹಿತಂ ಸಂತತೋದ್ಯೋಗಶೀಲಃ

ಶ್ರೀಮದ್ಗಂಗಾಧರೇಂದ್ರೋ ಜಯತಿ ಯತಿವರಃ ಶಾಂಕರಾದ್ವೈತದರ್ಶೀ ॥೫॥

ಸಂಸಾರಸಾಗರದಲ್ಲಿ ಮುಳುಗಿ ಕಷ್ಟಗಳೆಂಬ ಮಹಾಜಲಜೀವಿಗಳಿಂದ ಕಬಳಿಸಲ್ಪಡುತ್ತಿರುವ ಜಡಬುದ್ಧಿಯಿಂದ ಕೂಡಿದ ಈ ಜಗತ್ತನ್ನು ಭಗವದ್ಗೀತೆಯೆಂಬ ದೋಣಿಯ ಸಹಾಯದಿಂದ ಮೇಲೆತ್ತಿ ಸದ್ವಿವೇಕವೆಂಬ ದಡಕ್ಕೆ ಒಯ್ಯುತ್ತಿರುವ, ಸಮಾಜವನ್ನು ಸ್ವಸ್ಥವಾಗಿಡಲು ವ್ಯಸನರಹಿತವಾಗಿಸಲು ನಿರಂತರವಾಗಿ ಪ್ರಯತ್ನರತರಾದ, ಶಾಂಕರಾದ್ವೈತದರ್ಶನವನ್ನು ಪಡೆದ ಯತಿಶ್ರೇಷ್ಠರಾದ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸರ್ವಶ್ರೇಷ್ಠರಾಗಿ ಕಂಗೊಳಿಸುತ್ತಿದ್ದಾರೆ.

ಸ್ವೀಯೇ ಕಾಲೇ ಮಠೀಯಾನ್ಭವನಸಮುದಯಾನ್ಜೀರ್ಣತಾಂ ಪ್ರಾಪ್ಯಮಾಣಾನ್

ಪರ್ಯಾಪ್ತೈಃ ಸ್ವಾಪತೇಯೈರಪರಿಮಿತತಪಸ್ತೇಜಸಾ ಚೋದಧಾರ್ಷೀತ್

ಅವ್ಯಕ್ತಂ ಶಿಷ್ಯಕೋಟೇರ್ಹೃದಯಗತವಚಃ ಕಾರ್ಯರೂಪೇ ವಿತನ್ವನ್

ಶ್ರೀಮದ್ಗಂಗಾಧರೇಂದ್ರೋ ಜಯತಿ ಯತಿವರಃ ಶಾಂಕರಾದ್ವೈತದರ್ಶೀ ॥೬॥

ತನ್ನ ಕಾಲದಲ್ಲಿ ಜೀರ್ಣಾವಸ್ಥೆಲ್ಲಿದ್ದ ಮಠಕ್ಕೆ ಸಂಬಂಧಿಸಿದ ಕಟ್ಟಡಸಮೂಹಗಳನ್ನು ಯೋಗ್ಯವಾದ ಧನಸಂಪತ್ತಿನಿಂದ ಮತ್ತು ತಮ್ಮ ಅಪರಿಮಿತ ತಪಸ್ಸಿನ ಪ್ರಭಾವದಿಂದ ನವೀಕರಿಸಿ ತಮ್ಮ ಶಿಷ್ಯರ ಮನಸ್ಸಿನಲ್ಲಿರುವ ಭಾವವನ್ನು ಅರಿತು ಪೂರೈಸಿ ಮಠಕ್ಕೆ ಹೊಸ ಶೋಭೆಯನ್ನು ತಂದ ಶಾಂಕರಾದ್ವೈತದರ್ಶನವನ್ನು ಪಡೆದ ಯತಿಶ್ರೇಷ್ಠರಾದ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸರ್ವಶ್ರೇಷ್ಠರಾಗಿ ಕಂಗೊಳಿಸುತ್ತಿದ್ದಾರೆ.

ದೃಷ್ಟ್ವಾ ಯಂ ಪೂತಭಾವೋ ಝಟಿತಿ ಸಮುದಿಯಾದ್ಭಾವುಕಾನಾಂ ನಿತಾಂತಂ

ಸಾನ್ನಿಧ್ಯೇ ಯಸ್ಯ ಜೀವನ್ ಗಣಯತಿ ಸುಕೃತಂ ಪ್ರಾಕ್ಕೃತಂ ಸಜ್ಜನೌಘಃ

ಕಷ್ಟಂ ಶಬ್ದಾವಶಿಷ್ಟಂ ಪ್ರಕುರುತ ಇತಿ ಸ ಸ್ತೂಯತೇ ಶಿಷ್ಯವೃಂದೈಃ

 ಶ್ರೀಮದ್ಗಂಗಾಧರೇಂದ್ರೋ ಜಯತಿ ಯತಿವರಃ ಶಾಂಕರಾದ್ವೈತದರ್ಶೀ ॥೭॥

ಯಾರನ್ನು ನೋಡಿ ಭಕ್ತರ ಮನಸ್ಸಿನಲ್ಲಿ ಒಮ್ಮೆಲೇ ಪವಿತ್ರಭಾವವು ಅತಿಶಯವಾಗಿ ಜಾಗ್ರತವಾಗುವುದೋ, ಯಾರ ಸನ್ನಿಧಿಯಲ್ಲಿ ಸಜ್ಜನಸಂಘವು ತಮ್ಮ ಪೂರ್ವಜನ್ಮದ ಪುಣ್ಯಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಕೃತಾರ್ಥಭಾವವನ್ನು ಹೊಂದುವುದೋ , ಮತ್ತು ಇವರ ಅನುಗ್ರಹದಿಂದ ಕಷ್ಟಗಳೆಲ್ಲ ನಷ್ಟವಾಗಿವೆ ಕೇವಲ ಕಷ್ಟವೆಂಬ ಶಬ್ದಮಾತ್ರ ಉಳಿದುಕೊಂಡಿದೆ ಎಂದು ಧನ್ಯತೆಯಿಂದ ಶಿಷ್ಯಸಮೂಹದಿಂದ ಸ್ತುತಿಸಲ್ಪಡುವ ಶಾಂಕರಾದ್ವೈತದರ್ಶನವನ್ನು ಪಡೆದ ಯತಿಶ್ರೇಷ್ಠರಾದ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸರ್ವಶ್ರೇಷ್ಠರಾಗಿ ಕಂಗೊಳಿಸುತ್ತಿದ್ದಾರೆ.

ವೇದಾನಾಂ ಸಾರಭೂತೋ ವಿಲಸತಿ ವದನೇ ಸರ್ವದೋಂಕಾರಮಂತ್ರಃ

ಚಿತ್ತಂ ತತ್ತ್ವೇऽಸ್ಯ ನಿತ್ಯಂ ರಮತ ಇತಿ ಬುಧೈರ್ಗೀಯತೇ ಸನ್ನಿಕೃಷ್ಟೈಃ

ಕೃತ್ವಾ ಕಾಯಂ ಸಹಾಯಂ ಚರತಿ ಗುರುರಯಂ ಸರ್ವಧರ್ಮಾನ್ನಯೋಕ್ತಾನ್

ಶ್ರೀಮದ್ಗಂಗಾಧರೇಂದ್ರೋ ಜಯತಿ ಯತಿವರಃ ಶಾಂಕರಾದ್ವೈತದರ್ಶೀ ॥೮॥

ವೇದಗಳ ಸಾರರೂಪವಾದ ಪ್ರಣವವು ಯಾರ ಬಾಯಿಯಲ್ಲಿ ಸರ್ವದಾ ಶೋಭಿಸುತ್ತದೆಯೋ, ಯಾವಾಗಲೂ ಇವರ ಮನಸ್ಸು ಪರಬ್ರಹ್ಮತತ್ತ್ವದಲ್ಲಿ ರಮಿಸುತ್ತಿರುತ್ತದೆಯೆಂದು ಸಮೀಪದಲ್ಲಿರುವ ಪಂಡಿತರಿಂದ ಸ್ತುತಿಸಲ್ಪಡುತ್ತಿರುವರೋ ಮತ್ತುಯಾರು ತಮ್ಮ ಶರೀರವನ್ನು ಸಾಧನವನ್ನಾಗಿ ಮಾಡಿಕೊಂಡು ಶಾಸ್ತ್ರೋಕ್ತವಾದ ಎಲ್ಲ ಕರ್ಮಗಳನ್ನೂ ಶ್ರದ್ಧೆಯಿಂದ ಆಚರಿಸುತ್ತಿರುವರೋ ಅಂತಹ ಗುರುವರೇಣ್ಯರಾದ ಶಾಂಕರಾದ್ವೈತದರ್ಶನವನ್ನು ಪಡೆದ ಯತಿಶ್ರೇಷ್ಠರಾದ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸರ್ವಶ್ರೇಷ್ಠರಾಗಿ ಕಂಗೊಳಿಸುತ್ತಿದ್ದಾರೆ.

ರಚನೆ -  ಬಾಲಚಂದ್ರ ಭಟ್ಟ ಬಾಳೇಗದ್ದೆ.

ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.