🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಅಜಾತಪುತ್ರನಾಮೋತ್ಕೀರ್ತನ ನ್ಯಾಯ

 ಅಜಾತಪುತ್ರನಾಮೋತ್ಕೀರ್ತನ ನ್ಯಾಯ

 ಕೆಲವೊಮ್ಮೆ ನಾವು ಯಾವುದೋ ಒಂದು ಕೆಲಸವನ್ನು ಪ್ರಾರಂಭಮಾಡುವ ಮೊದಲೇ ಕೆಲಸದ ಫಲದ ಬಗ್ಗೆ ಕನಸು ಕಾಣುತ್ತಿರುತ್ತೇವೆ. ಕನ್ನಡದಲ್ಲಿ ಒಂದು ಗಾದೆ ಮಾತಿದೆ, " ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತೆ " . ಇದನ್ನೇ ಈ ನ್ಯಾಯ ತಿಳಿಸುತ್ತದೆ. 'ಅಜಾತಪುತ್ರನಾಮೋತ್ಕೀರ್ತನ ' ಎಂದರೆ ಹುಟ್ಟುವವನು ಮಗನೋ, ಮಗಳೋ ಎನ್ನುವುದೇ ಗೊತ್ತಿಲ್ಲದೇ ಹೆಸರಿಟ್ಟಂತೆ. ಈ ನ್ಯಾಯ ಮನುಷ್ಯನ ಅತಿಯಾದ ಆತ್ಮವಿಶ್ವಾಸವನ್ನು ತೋರಿಸುತ್ತದೆ.ಮನುಷ್ಯನಿಗೆ ವಿಶ್ವಾಸ ಬೇಕೇ ಬೇಕು.ಆದರೆ ಈ ಅತಿಯಾದ ಆತ್ಮವಿಶ್ವಾಸ ಎಂದಿಗೂ , ಯಾರಿಗೂ ಒಳ್ಳೆಯದಲ್ಲ. ಈ ಅತಿಯಾದ ನಿರೀಕ್ಷೆ , ಅತಿಯಾದ ಆತ್ಮವಿಶ್ವಾಸ ನಿರಾಶೆಗೆ ಕಾರಣವಾಗುತ್ತದೆ.

✍️ ಶ್ರೀಮತಿ ಪ್ರತಿಮಾ ಹೆಗಡೆ.

 ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.