श्रीचक्रार्चनतत्परं गुरुवरं गङ्गाधरेन्द्रं यतिम्।
विद्याज्ञानसुखेष्टदं च विमलं मोक्षस्य दिग्दर्शकम्।।
वेदान्तप्रतिपादकं च विबुधं धर्मस्य संरक्षकम्।
वन्दे शांकरतत्त्वबोधनिरतं श्रीशाल्मलीवासिनम्।।
(ಶ್ರೀಚಕ್ರಾರ್ಚನತತ್ಪರಂ ಗುರುವರಂ ಗಂಗಾಧರೇಂದ್ರಂ ಯತಿಮ್।
ವಿದ್ಯಾಜ್ಞಾನಸುಖೇಷ್ಟದಂ ಚ ವಿಮಲಂ ಮೋಕ್ಷಸ್ಯ ದಿಗ್ದರ್ಶಕಂ।।
ವೇದಾಂತಪ್ರತಿಪಾದಕಂ ಚ ವಿಬುಧಂ ಧರ್ಮಸ್ಯ ಸಂರಕ್ಷಕಮ್ ।
ವಂದೇ ಶಾಂಕರತತ್ವಬೋಧನಿರತಂ ಶ್ರೀಶಾಲ್ಮಲೀ ವಾಸಿನಮ್।।)
ಅನ್ವಯ -
श्रीशाल्मलीवासिनम् विद्याज्ञानसुखेष्टदं च विमलं मोक्षस्य दिग्दर्शकम् वेदान्तप्रतिपादकं च विबुधं धर्मस्य संरक्षकम् शांकरतत्त्वबोधनिरतं श्रीचक्रार्चनतत्परं गुरुवरं गङ्गाधरेन्द्रं यतिम् वन्दे।
ಭಾವಾರ್ಥ -
ಶಾಲ್ಮಲೀ ತೀರದಲ್ಲಿ ವಾಸಿಸುವವರೂ (ಶಿಷ್ಯರಿಗೆ) ವಿದ್ಯೆಯನ್ನೂ ಜ್ಞಾನವನ್ನೂ ಸುಖಗಳನ್ನೂ ಇಷ್ಟಗಳನ್ನೂ ದಯಪಾಲಿಸುವವರೂ ಕಲಂಕರಹಿತರೂ ಮೋಕ್ಷಕ್ಕೆ ಮಾರ್ಗವನ್ನು ತೋರಿಸುವವರೂ ವೇದಾಂತತತ್ತ್ವವನ್ನು ಪ್ರತಿಪಾದಿಸುವವರೂ ಜ್ಞಾನಿಗಳೂ ಧರ್ಮಸಂರಕ್ಷಕರೂ ಶಂಕರರ ತತ್ವಗಳನ್ನು ಬೋಧಿಸುವುದರಲ್ಲಿ ನಿರತರೂ ಶ್ರೀಚಕ್ರಾರ್ಚನೆಯಲ್ಲಿ ಪರಾಯಣರೂ ಗುರುಶ್ರೇಷ್ಠರೂ ಆದ ಶ್ರೀ ಗಂಗಾಧರೇಂದ್ರ ಯತಿಗಳನ್ನು ವಂದಿಸುತ್ತೇನೆ.
ರಚನೆ - ವಿ. ಭಾಸ್ಕರ ಹೆಗಡೆ ಮೈಸೂರು
ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.
