ಬೇಸಿಗೆ ದಿನಗಳಲ್ಲಿ ಹಾಗೂ ಇತರ ದಿನಗಳಲ್ಲಿ ಎಲ್ಲರ ಮನೆಯ ತಾಯಂದಿರು ಮಕ್ಕಳಿಗೆ, ಯುವಕರಿಗೆ ಮಜ್ಜಿಗೆ ಕುಡಿಯಿರಿ ಎಂದು ಹೇಳುವುದು ಮಲೆನಾಡಿನಲ್ಲಿ ತೀರ ಸಾಮಾನ್ಯ. ಆದರೆ ಈ ತಾಯಂದಿರು ಹೇಳಿದಂತೆ ಮಜ್ಜಿಗೆಯನ್ನು ಸೇವಿಸುವವರು ಹತ್ತರಲ್ಲಿ ಒಬ್ಬರು ಇಬ್ಬರು. ಇನ್ನು ಎಂಟು ಜನರು ಇದಕ್ಕೆ ನಕಾರಾತ್ಮಕ ಭಾವನೆಯನ್ನು ತೋರಿಸುತ್ತ ಮೂಗು ಮುರಿಯುವ ಯುವಜನರೇ. ಏರಿಯೆಟೆಡ್ ತಂಪು ಪಾನೀಯ, ಇತರ ತಂಪು ಪಾನೀಯ, ಪುಡಿ ಹಾಕಿ ತಯಾರು ಮಾಡುವ ತಂಪು ಗಳಿಗೆ ಹೇಳುವ ಮೊದಲೇ ಅಡ್ಡಿ ಇಲ್ಲ ಹೇಳುವಂತ ಒಂದು ಮಾನಸಿಕತೆ ಈಗ ಎಲ್ಲರ ಮನದಲ್ಲಿ. ಇವುಗಳು ಆರೋಗ್ಯಕರ ಲಾಭವನ್ನು ನೀಡದೆ ಅನಾರೋಗ್ಯವನ್ನು ಉಂಟುಮಾಡುವಂತಹ ಎಲ್ಲ ಅವಕಾಶಗಳನ್ನು ಭರಪೂರದಲ್ಲಿ ಒದಗಿಸುತ್ತವೆ.
ಎಲ್ಲ ಯುವ ಜನತೆಯ ಲಕ್ಷ ಚರ್ಮ, ಕೇಶ, ಮುಖದ ಕಡೆಗೆ ಇತ್ತೀಚಿಗೆ ಜಾಸ್ತಿಯಾಗಿದೆ ಇವುಗಳ ಆರೋಗ್ಯ ಕಾಪಾಡುವಲ್ಲಿ ಮಜ್ಜಿಗೆ ಮಹತ್ತರ ಪಾತ್ರವನ್ನು ವಹಿಸುತ್ತದೆ. ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲವು ನಮ್ಮ ಚರ್ಮಕ್ಕೆ ಒಳ್ಳೆಯದು. ಮಜ್ಜಿಗೆ ನಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಅತ್ಯುತ್ತಮ ಸ್ಕಿನ್ ಕ್ಲೆನ್ಸರ್ ಹಾಗೂ ಟೋನರ್ ಆಗಿದೆ. ಇದು ಟ್ಯಾನ್, ಮೊಡವೆ ಕಲೆಗಳು ಮತ್ತು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ನಮ್ಮ ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಹೊಳಪು ನೀಡುತ್ತದೆ. ವಯಸ್ಸಾಗುವುದನ್ನು ವಿಳಂಬಗೊಳಿಸುತ್ತದೆ. ಇಂತಹ ಇವತ್ತಿನ ತೊಂದರೆಯ ವಿದ್ಯಮಾನಗಳಿಂದ ದೂರ ಮಾಡುವ ಗುಣವನ್ನು ಹೊಂದಿರುವಂತಹ ಮಜ್ಜಿಗೆಯನ್ನು ಅಮೃತ ಸಮಾನ ಎಂದು ಕರೆದಿರುತ್ತಾರೆ. ಮಜ್ಜಿಗೆ ಒಂದು ಅತ್ಯುತ್ತಮ ಜಲಸಂಚಯನ ಪಾನೀಯವಾಗಿದ್ದು ಅದು ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೆವರುವಿಕೆಯಿಂದ ಕಳೆದುಹೋದ ಎಲೆಕ್ಟ್ರೋಲೈಟ್‌ಗಳನ್ನು ಬದಲಾಯಿಸುತ್ತದೆ ಮತ್ತು ನಿರ್ಜಲೀಕರಣವನ್ನು ತಡೆಯುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಮಜ್ಜಿಗೆ. ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪರಿಣಾಮವಾಗಿ ಹೆಚ್ಚಿದ ರೋಗನಿರೋಧಕ ಶಕ್ತಿಗೆ ಕಾರಣವಾಗುತ್ತದೆ.
ಇದು ನಿಯಮಿತ ಕರುಳಿನ ಚಲನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ .
ಹಾಗಾಗಿ ಯಾರಾದರೂ ಮಜ್ಜಿಗೆ ಕುಡಿಯಿರಿ ಮಜ್ಜಿಗೆ ಕೊಡಲಾ ಎಂದು ಹೇಳಿದರೆ ಬೇಡ ಅನ್ನೋದನ್ನ ಮಾತ್ರ ಹೇಳಬೇಡಿ.
ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ