🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಕಗ್ಗಸೌರಭ- 2

 



ಜೀವ ಜಡರೂಪ ಪ್ರಪಂಚವನದಾವುದೋ।
ಆವರಿಸಿಕೊಂಡುಮೊಳನೆರೆದುಮಿಹುದಂತೆ॥
ಭಾವಕೊಳಪಡದಂತೆ ಅಳತೆಗಳವಡದಂತೆ।
ಆ ವಿಶೇಷಕೆ ನಮಿಸೊ - ಮಂಕುತಿಮ್ಮ ॥ ೨ ॥
....
ನಮಗೆ ಕಾಣಸಿಗುವ ಜಗತ್ತಿನಲ್ಲಿ ಪ್ರಮುಖವಾಗಿ ಇರುವುದು ಎರಡೇ. ಒಂದು ಜಡ ಮತ್ತು ಮತ್ತೊಂದು ಜೀವ. ಜಡವೆಂದರೆ ಚೇತನವಿಲ್ಲದ್ದು. ಜೀವವೆಂದರೆ ಚೇತನ . ಇವೆರಡರ ಸಮ್ಮಿಲನವೇ ಜಗದ್ವ್ಯಾಪಾರ ಇವೆರಡರಲ್ಲೂ ತುಂಬಿಕೊಂಡಿರುವ, ಭಾವದಿಂದ ಊಹಿಸಲಸಾಧ್ಯವಾದ, ಅಳತೆಗೆ  ಸಿಗದ ವ್ಯಾಪಕತ್ವವು ಹೊಂದಿರುವ ಆ ವಿಶೇಷಕೆ (ಪರಮಾತ್ಮನಿಗೆ) ನಮಿಸಬೇಕು, ಮಣಿಯಬೇಕು, ನಮಸ್ಕರಿಸಬೇಕು ಎನ್ನುವುದು ಆಶಯ.

 ನಿರೂಪಣೆ - ತಿಮ್ಮಣ್ಣ ಭಟ್ ಬೆಂಗಳೂರು.
ಸಂಗ್ರಹ- ಶ್ರೀ ಸ್ವರ್ಣವಲ್ಲೀ ಭಕ್ತವೃಂದ.