🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

- ಕಗ್ಗಸೌರಭ- 1

       



                ಕಗ್ಗ... ೧

ಶ್ರೀ ವಿಷ್ಣು ವಿಶ್ವಾದಿ ಮೂಲ ಮಾಯಾಲೋಲ ।

ದೇವ ಸರ್ವೇಶ ಪರಬೊಮ್ಮನೆಂದು ಜನಂ  ॥

ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ ।

ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ ॥ ೧ ॥

....

ಸಾಮಾನ್ಯ ಜನರು ದೇವರನ್ನು ಕಂಡಿಲ್ಲ. ಆದರೂ ವಿಶ್ವಕ್ಕೆ ಮೂಲವಾದ ಶ್ರೀ ವಿಷ್ಣು, ಮಾಯಾಲೋಲ, ದೇವರು, ಪರಬ್ರಹ್ಮ, ಸರ್ವಕ್ಕೂ ಒಡೆಯನಾದ ಪರಮ ಪುರುಷ ಹೀಗೆ ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿದ್ದಾರೆ. ಆ ವಿಚಿತ್ರಕ್ಕೆ ಶರಣಾಗು ಎನ್ನುವುದು ಈ ಪದ್ಯದ ತಾತ್ಪರ್ಯ.

.... ನಿರೂಪಣೆ- ತಿಮ್ಮಣ್ಣ ಭಟ್ ಬೆಂಗಳೂರು

ಸಂಗ್ರಹ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ .