ಅಗ್ನಿಶಿಖಾನ್ಯಾಯ
ಬೆಂಕಿಯ ಜ್ವಾಲೆ ಯಾವಾಗಲೂ ಮೇಲ್ಮುಖವಾಗಿಯೇ ಉರಿಯುತ್ತದೆ ಉದಾಹರಣೆಗೆ ನಾವು ಯಾವುದೇ ಒಂದು ವಸ್ತುವಿಗೆ ಬೆಂಕಿಯನ್ನು ಹೊತ್ತಿಸಿ ಕೆಳಮುಖನಾಗಿ ಹಿಡಿದುಕೊಂಡರೆ ಬೆಂಕಿ ಕೆಳಮುಖನಾಗಿ ಉರಿಯದೆ ಮೇಲ್ಮುಖವಾಗಿ ಉರಿಯುತ್ತದೆ ಅದು ತನ್ನತನವನ್ನು ಬಿಟ್ಟು ಕೊಡುವುದಿಲ್ಲ ಅದೇ ರೀತಿ ಯಾವ ವ್ಯಕ್ತಿ ಎಂದಿಗೂ ತನ್ನ ಸ್ವಭಾವವನ್ನು ಬಿಟ್ಟು ಕೊಡದೆ ಜೀವನದಲ್ಲಿ ಅಧೋಮುಖಿ ಆಗದೆ ನಿರಂತರ ಉತ್ಕರ್ಷದೆಡೆಗೆ ಹೋಗುತ್ತಾನೋ ಅಂತಹ ವ್ಯಕ್ತಿಗೆ ಈ ನ್ಯಾಯ ಸರಿ ಹೊಂದುತ್ತದೆ.
✍️ ಶ್ರೀಮತಿ ಪ್ರತಿಮಾ ಹೆಗಡೆ
ಸಂಗ್ರಹ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.
[ಪ್ರತಿ ಬುಧವಾರ ಈ ಅಂಕಣ ಪ್ರಸಾರವಾಗುತ್ತದೆ.]
