🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಕಗ್ಗಸೌರಭ-10




ಏನು ಪ್ರಪಂಚವಿದು! ಏನು ಧಾಳಾಧಾಳಿ!।

ಏನದ್ಭುತಾಪಾರಶಕ್ತಿನಿರ್ಘಾತ! ॥

ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು?।

ಏನರ್ಥವಿದಕೆಲ್ಲ?- ಮಂಕುತಿಮ್ಮ ॥ ೧೦ ॥


ಇಲ್ಲಿಯವರೆಗೆ ಬಂದ ೯ ಕಗ್ಗಗಳಲ್ಲಿ, ಮೊದಲ ಮೂರು ಕಗ್ಗಗಳಲಿ, ಶ್ರೀ ಗುಂಡಪ್ಪನವರು, ಆ ಪರಮಾತ್ಮನೆಂದೆನಿಸಿಕೊಂಡ, ಪರಮಶಕ್ತಿಗೆ ನಮಿಸುತ್ತಾ, ಮುಂದಿನ ಕಗ್ಗಗಳಲ್ಲಿಮನುಷ್ಯನ ಜೀವನದ ಮತ್ತು ಸೃಷ್ಟಿಯ ವಿಚಿತ್ರಗಳನ್ನು ಬರೆದಿದ್ದಾರೆ. ನಂತರದ ಐದಾರು ಕಗ್ಗಗಳಲ್ಲಿ ಬಹುಶಃ ಎರಡನೇ ಮಹಾ ಯುದ್ಧ ಆರಂಭವಾಗಿ ಎಲ್ಲೆಲ್ಲೂ ಹಾಹಾಕಾರ ದಾಳಿಗಳು. ಇವಗಳನ್ನು ಕಂಡು ಅಂದಿನ ಸಮಯಕ್ಕೆ ಅವರ ಅನುಭೂತಿ ಏನಿತ್ತು ಎಂಬುದು ಇಂದಿನ ಮತ್ತು ಮುಂದಿನ ಕೆಲವು ಕಗ್ಗಗಳಲ್ಲಿ ಕಾಣಬಹುದು. ಯಾರೋ ಒಬ್ಬರು ಸರ್ವಾಧಿಕಾರಿಯ / ದುರಾಸೆಯ ಫಲವಾಗಿ ನಡೆದ ಯುದ್ಧದ ಪರಿಣಾಮ ಘೋರ, ಅವರ್ಣನೀಯ, ಅಕಲ್ಪನೀಯ. ಭವಿಷ್ಯದಲ್ಲಿ

ಗೊತ್ತು ಗುರಿ ಇಲ್ಲದೆ ಇಂತಹ ಯುದ್ಧಗಳಾದರೆ ಅದರ ಭಯಂಕರ ಪರಿಣಾಮದ ಎಚ್ಚರಿಕೆಯೂ ಈ ಕಗ್ಗದ ಗೂಢಾರ್ಥವಿರಬಹುದೇ?.

ನಿರೂಪಣೆ - ಶ್ರೀ ತಿಮ್ಮಣ್ಣ ಭಟ್, ಬೆಂಗಳೂರು.

ಪ್ರಸರಣ  - ಶ್ರೀ ಸ್ವರ್ಣವಲ್ಲೀ ಭಕ್ತವೃಂದ