ಅರ್ಧಜರತೀಯ ನ್ಯಾಯವು ಅತ್ಯಂತ ಪ್ರಸಿದ್ಧವಾದ ಶಾಸ್ತ್ರೀಯ ನ್ಯಾಯವಾಗಿದೆ. "ಜರತೀ" ಎಂದರೆ ಮುದುಕಿ ಎಂದು ಅರ್ಥ. ಅರ್ಧ ಜರತೀ ಎಂದರೆ ಒಬ್ಬಳು ಯುವತಿ ಅರ್ಧ ಮುದುಕಿ ಆಗಿದ್ದಾಳೆ ಎಂದು ಅರ್ಥ ಬರುತ್ತದೆ. ಏನು ಇದರ ತಾತ್ಪರ್ಯ? ಎಂದರೆ ಯಾವುದೇ ಒಂದು ವಸ್ತು ಅರ್ಧ ಸರಿಯಿಲ್ಲದೇ ಇನ್ನರ್ಧ ಸರಿ ಇದ್ದರೆ ಅದನ್ನ ಯಾರು ತಾನೇ ಸ್ವೀಕರಿಸುತ್ತಾರೆ? ಅರ್ಧ ವೃದ್ಧಾಪ್ಯ ಹೊಂದಿದ ಯುವತಿಯನ್ನು ಯಾರಾದರೂ ಮದುವೆಯಾಗಲು ಒಪ್ಪುವರೇ? ಅದೇ ರೀತಿ ಯಾವುದಾದರೂ ಒಂದು ವಿಷಯವನ್ನು ಪೂರ್ಣವಾಗಿ ಒಪ್ಪಬೇಕು. ಇಲ್ಲವೇ ಪೂರ್ಣವಾಗಿ ಬಿಡಬೇಕು. ಉದಾಹರಣೆಗೆ ವೇದದಲ್ಲಿ ಉಲ್ಲೇಖವಾದ ಅಹಿಂಸೆ ಇತ್ಯಾದಿ ವಿಷಯಗಳನ್ನು ಒಪ್ಪಿ ವೇದದಲ್ಲಿಯೇ ಹೇಳಿರುವ ವರ್ಣಾಶ್ರಮಧರ್ಮವೇ ಮೂದಲಾದ ಅಂಶಗಳನ್ನು ತ್ಯಜಿಸುವುದು ಸರಿಯಲ್ಲ. ಒಂದು ಗ್ರಂಥದಲ್ಲಿ ಹೇಳಿದ ಅರ್ಧ ವಿಷಯವನ್ನು ಮಾತ್ರ ಒಪ್ಪಿ ಇನ್ನರ್ಧವನ್ನು ಬಿಡುವುದು. ಯಾವುದಾದರೂ ವಾದವನ್ನು ಅರ್ಧ ಮಾತ್ರ ಒಪ್ಪಿ ಇನ್ನರ್ಧ ಬಿಡುವುದು. ಇವೆಲ್ಲವೂ ಅರ್ಧಜರತೀಯನ್ಯಾಯಕ್ಕೆ ಉದಾಹರಣೆ ಆಗುತ್ತದೆ.
ಆನಂದಗಿರಿ ವ್ಯಾಖ್ಯಾನದಲ್ಲಿ ಒಂದು ಸೊಗಸಾದ ಉದಾಹರಣೆ ಈ ಅರ್ಧಜರತೀಯ ನ್ಯಾಯಕ್ಕೆ ಸಂಬಂಧಿಸಿದ್ದಿದೆ. "ಒಂದು ಕೋಳಿಯಲ್ಲಿ ಅರ್ಧಭಾಗ ತಿನ್ನುವುದಕ್ಕೂ, ಅರ್ಧಭಾಗ ಮೊಟ್ಟೆ ಇಡುವುದಕ್ಕೂ ಬಳಸಿದರೆ" ಅದು ಅರ್ಧಜರತೀಯ ನ್ಯಾಯ.
ನಿರೂಪಣೆ - ಶ್ರೀಮತಿ ಪ್ರತಿಮಾ ಹೆಗಡೆ.
ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.
