ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? ।
ಬಗೆದು ಬಿಡಿಸುವರಾರು ಸೊಜಿಗವನಿದನು? ॥
ಜಗವ ನಿರವಿಸಿದ ಕೈಯೊದಾದೊಡೇಕಿಂತು ।
ಬಗೆಬಗೆಯ ಜೀವಗತಿ? - ಮಂಕುತಿಮ್ಮ ॥ ೬ ॥
ಈ ರೀತಿಯ ಪ್ರಶ್ನೆಗಳು ಅನೇಕ ದಾರ್ಶನಿಕರನ್ನೂ ಸಹ ಅತಯಾಗಿ ಕಾಡಿದೆ. ಈ ಸೃಷ್ಟಿಯು ಒಗಟೇ? ಈ ಬಾಳಿಗೆ ಅರ್ಥವೇನು ?. ಆದರೆ ಈ ಒಗಟನ್ನು ಬಿಡಿಸುವವರು ಯಾರು. ಈ ಜಗತ್ತನ್ನು ಸೃಷ್ಟಿಮಾಡಿದ ಕೈ ಒಂದೇ ಆದರೆ , ಸೃಷ್ಟಿಯಲ್ಲಿ ಸಮಾನತೆಯೇಕಿಲ್ಲ ?
ಬೇರೆ ಬೇರೆಯಾದ ಜೀವಗತಿ ಏಕೆ? ಎನ್ನುವ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳುವ ರೀತಿಯಲ್ಲಿ ಶ್ರೀ ಗುಂಡಪ್ಪನವರು, ನಮ್ಮೆಲ್ಲರ ಮುಂದೆ ಈ ಕಗ್ಗದ ರೂಪದಲ್ಲಿ ಇಟ್ಟಿದ್ದಾರೆ. ಉತ್ತರ ಹುಡುಕುವ ಹಾದಿಯಲ್ಲಿ ವ್ಯಕ್ತಿ ಜ್ಞಾನಿಯಾಗಲು ಸಾಧ್ಯ.
ನಿರೂಪಣೆ - ತಿಮ್ಮಣ್ಣ ಭಟ್, ಬೆಂಗಳೂರು.
ಸಂಗ್ರಹ- ಸ್ವರ್ಣವಲ್ಲಿ ಭಕ್ತವೃಂದ
.jpg)