🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಅರಣ್ಯರೋದನನ್ಯಾಯ


ಅರಣ್ಯರೋದನ ನ್ಯಾಯ :-

      ಪ್ರಪಂಚದಲ್ಲಿ ಯಾವುದಾದರೂ ಕೆಲಸವನ್ನು ಮಾಡುವಾಗ ಅದರ ಫಲಾಫಲದ ಬಗ್ಗೆ ನಾವು ಯೋಚಿಸುತ್ತೇವೆ. ಫಲವೇ ಇಲ್ಲದ ಕಾರ್ಯ ಕೇವಲ ಕಾಲಹರಣವೇ ಸರೀ. ಆ ರೀತಿಯ ಯಾವುದೇ ಉಪಯೋಗವಿಲ್ಲದೇ ಮಾಡಿದ ಕೆಲಸವನ್ನು ಹೇಳುವಾಗ ಈ ನ್ಯಾಯವನ್ನು ಬಳಸುತ್ತಾರೆ. ಮರಳುಗಾಡಿನಲ್ಲಿ ಮಳೆ ಸುರಿಯುವುದು, ಅರಣ್ಯದಲ್ಲಿ ಕೂತು ಅಳುವುದು , ಕುರುಡನಿಗೆ ಮುಖವನ್ನು ನೋಡಿಕೋ ಎಂದು ಕನ್ನಡಿ ಕೊಡುವುದು,   ಇವೆಲ್ಲವೂ ವ್ಯರ್ಥವಾದ ಕೆಲಸಗಳು. ಇಂತಹ ಕೆಲಸವನ್ನು ವಿವರಿಸುವಾಗ ಈ ನ್ಯಾಯವನ್ನು ಉಪಯೋಗಿಸುತ್ತೇವೆ.  ಅರಣ್ಯ ರೋದನ ಎಂದರೆ ಕಾಡಿನಲ್ಲಿ ಕುಳಿತು ಅಳುವುದು ಎಂದು ಅರ್ಥ. ಯಾರೂ ಇಲ್ಲದ ಪ್ರದೇಶದಲ್ಲಿ ಎಷ್ಟು ಅತ್ತರೂ ಯಾರೂ ಸಹಾಯಕ್ಕೆ ಬರುವುದಿಲ್ಲ. ಆ ಅಳುವಿನಿಂದ ಏನೂ ಪ್ರಯೋಜನವಿಲ್ಲ. ಇದುವೇ ಈ ನ್ಯಾಯದ ತಾತ್ಪರ್ಯ.  

ನಿರೂಪಣೆ - ಶ್ರೀಮತಿ ಪ್ರತಿಮಾ ಹೆಗಡೆ. 

ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.