🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಅಶೋಕವನಿಕಾ ನ್ಯಾಯ

 ಅಶೋಕವನಿಕಾ ನ್ಯಾಯ :- 


ರಾವಣನ ಅಧೀನದಲ್ಲಿ ಅನೇಕ ಸೆರೆಮನೆಗಳು , ಉದ್ಯಾನವನಗಳಿದ್ದರೂ ಕೂಡ ರಾವಣನು ಸೀತೆಯನ್ನು ಅಪಹರಿಸಿಕೊಂಡು ಬಂದಾಗ ಅಶೋಕವನದಲ್ಲಿ ಸೀತೆಯನ್ನು ಇರಿಸುತ್ತಾನೆ. ಯಾವುದೇ ಒಂದು ನಿರ್ದಿಷ್ಟ ಉದ್ದೇಶ ಅಥವಾ ಕಾರಣವಿಲ್ಲದೆ ಮಾಡಿದ ಕೆಲಸವದು. ಯಾವುದೋ ಒಂದು ಕಡೆ ಇಡಬೇಕಾಗಿತ್ತು ಅದಕ್ಕಾಗಿ ಅಶೋಕವನದಲ್ಲಿ ಇಟ್ಟನು. ಹಾಗೆಯೇ ಕೆಲವೊಮ್ಮೆ ನಾವು ಮಾಡುವ ಕೆಲಸಗಳಿಗೂ ನಿರ್ದಿಷ್ಟವಾದ ಕಾರಣಗಳಿರುವುದಿಲ್ಲ ಆದರೂ ಆ ಕೆಲಸಗಳನ್ನು ನಿಯಮ ಮಾತ್ರಕ್ಕಾಗಿ ಮಾಡಿರುತ್ತೇವೆ. ಆ ಸಮಯದಲ್ಲಿ ಅಶೋಕವನಿಕಾ ನ್ಯಾಯ ಅನ್ವಯಿಸುತ್ತದೆ. ಉದಾಹರಣೆಗೆ , ಅನೇಕರು ಉದ್ಯಾನವನಕ್ಕೇ ಹೋಗಿ ವಾಯುವಿಹಾರ ಮಾಡುತ್ತಾರೆ. ವಾಯುವಿಹಾರ ಮಾಡಲು ಉದ್ಯಾನವನಕ್ಕೇ ಹೋಗಬೇಕು ಎಂಬ ನಿಯಮವೇನೂ ಇಲ್ಲ ಆದರೆ ಎಲ್ಲಾದರೂ ಒಂದು ಕಡೆ ವಾಯುವಿಹಾರ ಮಾಡಬೇಕು ಆದ್ದರಿಂದ ಉದ್ಯಾನವನದಲ್ಲಿ ವಾಯು ವಿಹಾರ ಮಾಡುತ್ತಾರೆ.

ನಿರೂಪಣೆ - ಶ್ರೀಮತಿ ಪ್ರತಿಮಾ ಹೆಗಡೆ. 

ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.