🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಕಗ್ಗ ಸೌರಭ - 20

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? ।
ಚಂಡಚತುರೋಪಾಯದಿಂದಲೇನಹೊದು? ॥
ತಂಡುಲದ ಹಿಡಿಯೊಂದು ತುಂಡು ಬಟ್ಟೆಯದೊಂದು ।
ಅಂಡಲೆತವಿದಕೇನೊ? - ಮಂಕುತಿಮ್ಮ ॥ ೨೦ ॥

ಭಾರತೀಯರಾದ ನಮಗೆ ಎಲ್ಲವೂ ದೈವವೇ? ಗಿಡ ಮರ ಬಳ್ಳಿ ನದಿ ಗುಡ್ಡ ಬೆಟ್ಟ, ಆಕಾಶ ಸೂರ್ಯ ಚಂದ್ರ ಎಲ್ಲ ಗ್ರಹಗಳು, ಪಕ್ಷಿ ಮೀನು ಪ್ರಾಣಿಗಳು ಎಲ್ಲವೂ ದೇವರೇ. ಅಷ್ಟೇ ಅಲ್ಲ ಎಲ್ಲದರಲ್ಲೂ ದೈವವನ್ನು ಕಾಣುವ ಸಂಸ್ಕೃತಿ ನಮ್ಮದು. ಅವುಗಳನ್ನೆಲ್ಲ ಕಾಪಾಡುವ ಕಾರಣದಿಂದ ಅವುಗಳಿಗೆಲ್ಲ ದೈವತ್ವವನ್ನು ಆರೋಪಿಸಿದ್ದಾರೆ ನಮ್ಮ ಪೂರ್ವಜರು. ಸ್ವಾರ್ಥ ಪ್ರೇರಿತ ದೈವಭಕ್ತಿ ಮತ್ತು
ಒಂದು ಹಿಡಿ ಅಕ್ಕಿಗಾಗಿ, ಹೊಟ್ಟೆ ತುಂಬಿಸಿಕೊಳ್ಳಲು, ಗೇಣುದ್ದ ಬಟ್ಟೆಗಾಗಿ, ಮೈಮುಚ್ಚಲು ಮನುಷ್ಯ ಇಷ್ಟೆಲ್ಲಾ ಮಾಡಬೇಕೆ? ಜೀವನದ ಗುರಿ ಇಷ್ಟು ಮಾತ್ರವಲ್ಲ. ಇದಕ್ಕೇ ಸೀಮಿತವಾದರೆ ಜೀವನ ಸಾರ್ಥಕವಾಗದು. ಮೇಲೆ ತಿಳಿಸಿದ ಅಂಶಗಳು ಸಾಧನೆಗಳಿಗೆ ಪೂರಕವಾಗಿರಬೇಕು.


ಲೇಖಕರು: ತಿಮ್ಮಣ್ಣ ಭಟ್ಟ ಬೆಂಗಳೂರು
ಪ್ರಸರಣ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ