ಸ್ವರ್ಣವಲ್ಲಿ ಮಠ ಪರಂಪರೆಯ ಹೇಳಿ
ಡಾ ರವಿಕಿರಣ ಪಟವರ್ಧನ ಶಿರಸಿ.
ಶಿರಸಿಯ ಪಟವರ್ಧನ ಕುಟುಂಬದವರಿಗೂ ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು(ಹಿಂದಿನ), ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳು ,ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು
(ಈಗಿನ), ಮೂವರು ಮಹಾನ್ ಯತಿಗಳ ಕಾಲದ ಐತಿಹಾಸಿಕ ಹೇಳಿದ ಕೇಳಿದ ಮಾಹಿತಿ.1911ರಲ್ಲಿ ಆಗಿನ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ವೈದ್ಯರತ್ನ ನೀಲಕಂಠರಾವ ಪಟವರ್ಧನರಿಗೆ ವೈದ್ಯಕೀಯ ಸೇವೆಯನ್ನೇ ಮಾಡುವಂತೆ ಆಜ್ಞಾಪಿಸುತ್ತಾರಂತೆ. ಆಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಕೆಲವರಿಗೆ ನಿಶುಲ್ಕ ಸೇವೆ ಒದಗಿಸುವಂತೆ ಹೇಳುತ್ತಾರೆ. ಅದರಂತೆ ಅವರು ಮುಂದುವರೆಸುತ್ತಾರೆ. ನಂತರದ ವರ್ಷಗಳಲ್ಲಿ
ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳು ಬಾಲಸನ್ಯಾಸಿಗಳಾಗಿ ಪೀಠಾರೋಹಣ ಮಾಡುತ್ತಾರೆ, ಆಗ ವೈದ್ಯರತ್ನ ನೀಲಕಂಠರಾವ ಪಟವರ್ಧನರಾಯರು ಸ್ವಾಮಿಗಳಿಗೆ ಪ್ರಮುಖವಾಗಿ ಶಿಕ್ಷಣ ಪಡೆಯುವಂತೆ ನಿವೇದಿಸಿ, ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಮೈಸೂರಿನಲ್ಲಿ ಮಾಡುತ್ತಾರಂತೆ. ಆಗ ಸಮಸ್ತ ಶಿಷ್ಯವೃಂದದವರ ಸಹಕಾರದಿಂದ ಅಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಿದ್ದರಂತೆ.
ತಾವು ಶಿಕ್ಷಣ ಪಡೆದು ಮಠಕ್ಕೆ ಬರಬೇಕು ಎಂದು ವೈದ್ಯರತ್ನ ನೀಲಕಂಠರಾವ ಪಟವರ್ಧನರಾಯರು
ವಿಜ್ಞಾಪಿಸಿದ್ದರಂತೆ. ಆ ಸಣ್ಣ ವಯಸ್ಸಿನ ಶ್ರೀಗಳಿಗೆ ಆವತ್ತಿಗೆ ಬೇಕಾಗುವ ಕೆಲವು ವ್ಯವಸ್ಥೆಗಳನ್ನು
ವೈದ್ಯರತ್ನ ನೀಲಕಂಠರಾವ ಪಟವರ್ಧನರಾಯರ ಮನೆಯಿಂದಲೇ ಮಾಡಲಾಗುತ್ತಿತ್ತಂತೆ. ಶಿಕ್ಷಣದ ಅವಧಿಯಲ್ಲಿ ಶ್ರೀಮಠದ ಆಗುಹೋಗುಗಳನ್ನು ಮಠದ ಶಿಷ್ಯರ ಬೆಂಬಲದಿಂದ ವೈದ್ಯರತ್ನ ನೀಲಕಂಠರಾವ ಪಟವರ್ಧನರೇ ನೋಡಿಕೂಳ್ಳುತ್ತೇನೆ ಎಂದು ತಿಳಿಸಿದ್ದರಂತೆ. ಆನಂತರ ವೈದ್ಯ ಗಣಪತಿರಾವ ಪಟವರ್ಧನರು ಶ್ರೀಗಳು( ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳು) ಮಠಕ್ಕೆ ಹಿಂದಿರುಗಿದ ನಂತರದ ಮಠದ ವ್ಯವಸ್ಥೆಗಳಿಗೆ ಸಂಪೂರ್ಣ ಕೈಜೋಡಿಸಿದ್ದರಂತೆ.
ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳ ಕಾಲದ ನರಸಿಂಹ ಜಯಂತಿಯ ತಯಾರಿಯ ಪತ್ರಗಳು, ಶಿರಸಿಯ ಖರೀದಿಯ ಪತ್ರಗಳು ಇತ್ಯಾದಿ ವೈದ್ಯ ಗಣಪತಿರಾವ ಪಟವರ್ಧನರು ಶ್ರೀ ಮಠಕ್ಕೆ ಸಲ್ಲಿಸಿದ ಸೇವೆಯ ಮಾಹಿತಿ ಹಾಗೂ ಅವರ ಮೇಲಿನ ವಿಶ್ವಾಸವನ್ನು ಹೇಳುತ್ತದೆ. ಅವಶ್ಯಕ ಸೇವೆಗಳಿಗಾಗಿ ಸ್ವತಃ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳೇ
ವೈದ್ಯ ಗಣಪತಿರಾವ ಪಟವರ್ಧನರಿಗೆ ಸ್ವತಃ ಪತ್ರ ಬರೆಯುತ್ತಿದ್ದರು. ಆನಂತರದ ಪರಿಸ್ಥಿತಿಗಳು ಬದಲಾದವು. ಶ್ರೀಮಠಕ್ಕೆ ಆಡಳಿತ ಮಂಡಳಿ, ಸಿಬ್ಬಂದಿವರ್ಗ ಇತರ ವ್ಯವಸ್ಥೆಗಳು ಆಯೋಜನೆ ಆದವು. ಆನಂತರದ ಇತಿಹಾಸ ಎಲ್ಲರಿಗೂ ತಿಳಿದಿರುವ ಸಂಗತಿ.