🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಕಗ್ಗಸೌರಭ-4




ಏನು ಜೀವನದರ್ಥ? ಏನು ಪ್ರಪಂಚಾರ್ಥ? ।

ಏನು ಜೀವಪ್ರಪಂಚಗಳ ಸಂಬಂಧ? ॥

ಕಾಣದಿಲ್ಲಿ‍ರ್ಪುದೇನಾನುಮುಂಟೆ? ಅದೇನು? ।

ಜ್ಞಾನಪ್ರಮಾಣವೇಂ? - ಮಂಕುತಿಮ್ಮ ॥ ೪ ॥


ಈ ನಮ್ಮ ಜೀವನಕ್ಕೆ ಏನಾದರೂ ಅರ್ಥ ಇದೆಯೇ? ನಾವಿರುವ ಈ ಪ್ರಪಂಚದ ಅರ್ಥವೇನು? ನಮ್ಮ ಮತ್ತು ನಾವು ಇರುವ ಈ ಪ್ರಪಂಚದ ಪರಸ್ಪರ ಸ೦ಬ೦ಧವೇನು? ಇವೆರಡನ್ನೂ ಬೆಸೆದಿರುವ, ನಮ್ಮ ಕಣ್ಣಿಗೆ ಕಾಣದ ಒಂದು ಶಕ್ತಿ ಏನಾದರೂ ಇದೆಯೇ? ಹಾಗಿದ್ದರೆ ಅದೇನು? ಅದು ನಮ್ಮ ವಿಚಾರ ಮತ್ತು ಜ್ಞಾನದ ಪರಿಧಿಯಿಂದ ಮೀರಿದೆಯೇ? ಹಾಗಾದರೆ ಅದು ಏನು? ” ಎಂಬ ಜಿಜ್ಞಾಸೆಯ ಭಾವಗಳನ್ನು ವ್ಯಕ್ತವಾಗುವುದರ ಜೊತೆಗೆ ಇವುಗಳನ್ನು ಯತಾರ್ಥವಾಗಿ ತಿಳಿಯಬೇಕಾದುದೂ ಅಗತ್ಯ.

ನಿರೂಪಣೆ - ತಿಮ್ಮಣ್ಣ ಭಟ್ ಬೆಂಗಳೂರು. 

ಸಂಗ್ರಹ - ಶ್ರೀ ಸ್ವರ್ಣವಲ್ಲಿ ಭಕ್ತವೃಂದ