🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಅಂಗಾರ ನ್ಯಾಯ

 ಅಂಗಾರ ನ್ಯಾಯ


ಅಂಗಾರ ಎಂದರೆ ಇದ್ದಿಲು ಎಂದರ್ಥ. ಅದು ತಣ್ಣಗಿದ್ದಾಗ ಹಿಡಿದರೆ ಕೈ ಕಪ್ಪಾಗುತ್ತದೆ, ಬಿಸಿಯಾಗಿದ್ದಾಗ ಹಿಡಿದರೆ ಕೈ ಸುಡುತ್ತದೆ. ಹೀಗೆಯೇ ಕೆಟ್ಟವರ ಸಹವಾಸ ಎಂದಿಗೂ ಒಳ್ಳೆಯದಲ್ಲ. ಕೆಟ್ಟವರು ಸೌಮ್ಯ ಸ್ವಭಾವದವರಾಗಿರಲಿ, ಅಥವಾ ಕ್ರೂರ ಸ್ವಭಾವದವರಾಗಿರಲಿ, ಅವರು ಕೆಟ್ಟದ್ದನ್ನೇ ಬಯಸುತ್ತಾರೆ ಮತ್ತು ಮಾಡುತ್ತಾರೆ. ಅಂಗಾರವು ಬಿಸಿಯಾಗಿರಲಿ ಅಥವಾ ಬಿಸಿ ಆರಿರಲಿ ಅದು ಕೈಗೆ ಕೆಟ್ಟದ್ದನ್ನೇ ಎಂದರೆ ಸುಟ್ಟ ಗಾಯವನ್ನು ಅಥವಾ ಕಪ್ಪುಕಲೆಯನ್ನು ನಿರ್ಮಾಣ ಮಾಡುತ್ತದೆ ಇದೇ ಈ ನ್ಯಾಯದ ಸಾರಾಂಶವಾಗಿದೆ.

ನಿರೂಪಣೆ - ಶ್ರೀಮತಿ ಪ್ರತಿಮಾ ಹೆಗಡೆ.

ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.