ಹೋಳಿ ಅಥವಾ ಹೋಲಿಕಾ ಎಂಬ ಈ ಹಬ್ಬವು ಭಾರತದಲ್ಲೆಲ್ಲ ಅನಿಯಂತ್ರಿತ ವಿನೋದ ಮತ್ತು ತಮಾಷೆಗಳ ಪ್ರದರ್ಶನಕ್ಕೆ ಮೀಸಲಾಗಿದೆ; ಆದರೆ ಎಲ್ಲ ಪ್ರದೇಶಗಳಲ್ಲಿಯೂ ಆಚರಣೆ ಒಂದೇ ರೀತಿಯಾಗಿಲ್ಲ. ಅದರ ಒಂದು ಅಂಗವಾದ ಉತ್ಸವಾಗ್ನಿ, ಬಂಗಾಳವನ್ನು ಬಿಟ್ಟರೆ ಮತ್ತೆಲ್ಲ ಕಡೆಗಳಲ್ಲಿಯೂ ಇದ್ದೇ ಇರುತ್ತದೆ. ಫಾಲ್ಗುನ ಶುಕ್ಲ ಪೂರ್ಣಿಮೆ ಯಂದು ಬಂಗಾಳದಲ್ಲಿ ಕೃಷ್ಣನ ಮೂರ್ತಿಯ ಉಯ್ಯಾಲೆ ಯಾಟದ ಉತ್ಸವವನ್ನಾಚರಿಸುತ್ತಾರೆ; ಆದರೆ ಅದನ್ನು ಭಾರತದ ಇತರ ಪ್ರದೇಶಗಳಲ್ಲಿ ಆಚರಿಸುವುದಿಲ್ಲ. ಈ ಹಬ್ಬವನ್ನು ಆಚರಿಸುವ ದಿನಗಳ ಸಂಖ್ಯೆಯೂ ಪ್ರದೇಶದಿಂದ ಪ್ರದೇಶಕ್ಕೆ ಬೇರೆಯಾಗುತ್ತದೆ. ಭಾರತದ ಅನೇಕ ಪ್ರದೇಶಗಳಲ್ಲಿ ಕಾಣಬರುವ ಇನ್ನೊಂದು ಸಮಾನ ಅಂಶವಿದು:- ಬಿದಿರು ಅಥವಾ ತಗಡಿನ ಪಿಚಕಾರಿಗಳಿಂದ ಬಣ್ಣದ ನೀರನ್ನು ಗೆಳೆಯರ ಮೇಲೆಲ್ಲ ಎರಚುವುದು ಇಲ್ಲವೆ ಬಣ್ಣದ ಪುಡಿಗಳನ್ನು ಎರಚಾಡುವುದು, ದೊಡ್ಡ ದೊಡ್ಡ ಪದವಿಗಳಲ್ಲಿರುವ ಜನರು ಕೂಡ ಈಗಲೂ ಈ ವಿನೋದದಲ್ಲಿ ಭಾಗವಹಿಸುವುದನ್ನು ನೋಡಬಹುದು. ಕೊಂಕಣದಲ್ಲಿ ಹೆಣ್ಣುವೇಷ ಹಾಕಿಕೊಂಡ ಗಂಡಸರು ದೊಡ್ಡ ಗುಂಪು ಹಿಂಬಾಲಿಸುತ್ತಿರುವಾಗ (ಹೆಚ್ಚಾಗಿ ಅಶ್ಲೀಲವಾದ) ಹಾಡು ಹೇಳುತ್ತ, ಸಂಗೀತ, ನಾಟ್ಯಗಳನ್ನು ಪ್ರದರ್ಶಿಸುತ್ತಾ ಹೋಗುತ್ತಾರೆ. ಅಂದು ಬಂಗಾಳದಲ್ಲಿ ಕೃಷ್ಣಪೂಜೆಗೆ ಮತ್ತು ಕಾಮನ ಬೆಂಕಿಯ ರೂಢಿಯಿರುವ ಮಿಕ್ಕ ಪ್ರದೇಶಗಳಲ್ಲಿ ಕಾಣುವ ಧಾರ್ಮಿಕ ವಿಧಿಯೆಂದರೆ ಇಷ್ಟೇ:- ಕಟ್ಟಿಗೆ ಕಡ್ಡಿಗಳು ಧಗಧಗ ಉರಿಯುತ್ತಿರುವಾಗ ಜನರು ಬೆಂಕಿಯ ಪ್ರದಕ್ಷಿಣೆ ಮಾಡುತ್ತಾ ಅದಕ್ಕೆ ತೆಂಗಿನಕಾಯಿಗಳನ್ನು ಎಸೆಯುತ್ತಾರೆ; ಅರ್ಧ ಸುಟ್ಟವನ್ನೇ ಹೊರಗೆ ತೆಗೆದುಕೊಂಡು ಸುಟ್ಟ ಕಾಯ ಚೂರನ್ನು ಜನರಿಗೆಲ್ಲ ಪ್ರಸಾದವೆಂದು ಹಂಚುತ್ತಾರೆ. ಕೆಲವು ಪ್ರದೇಶಗಳಲ್ಲಿ ಜನರು ಬಾಯನ್ನು ಮುಂಗೈಯಿAದ ಬಡಿದು ಕೊಳ್ಳುತ್ತಾ ಶಂಖವಾದ್ಯ ಮಾಡುತ್ತಾರೆ. ಭಾರತದಲ್ಲೆಲ್ಲ ಈ ಹಬ್ಬದ ಆಚರಣೆ ಹೇಗೆ ವಿವಿಧವಾಗಿದೆಯೆಂದು ವಿವರಗಳನ್ನೆಲ್ಲ ಈ ಸಮೀಕ್ಷೆಯಲ್ಲಿ ಕೊಡುವುದು ಸಾಧ್ಯವಿಲ್ಲ.
ಯುಧಿಷ್ಠಿರನು ಕೃಷ್ಣನಿಗೆ ಒಂದು ಪ್ರಶ್ನೆಮಾಡುತ್ತಾನೆ: ಪ್ರತಿಯೊಂದು ಊರು, ಹಳ್ಳಿಗಳಲ್ಲಿಯೂ ಜನರು ಫಾಲ್ಗುಣ ಹುಣ್ಣಿಮೆಯದಿನ ಹಬ್ಬವನ್ನೇಕೆ ಮಾಡುತ್ತಾರೆ? ಪ್ರತಿಯೊಂದು ಮನೆಯಲ್ಲಿಯೂ ಹುಡುಗರೇಕೆ ಚೇಷ್ಟೆ ಮಾಡುತ್ತಾ ಹೋಳಿಯ ಕಿಚ್ಚನ್ನು ಹಚ್ಚಿಸುತ್ತಾರೆ? ಅದರಲ್ಲಿ ಪೂಜಿಸಲ್ಪಡುವ ದೇವತೆ ಯಾರು? ಮತ್ತು ಅದಕ್ಕೆ ‘ಅಡಾಡಾ' ಎಂದು ಕರೆಯುವುದೇಕೆ? ಕೃಷ್ಣನು ಅದಕ್ಕೆ ಉತ್ತರವಾಗಿ ಒಂದು ಕಥೆ ಹೇಳುತ್ತಾನೆ. ಹಿಂದೆ ಢಂಡಾ ಎಂಬ ರಾಕ್ಷಸಿಯು ಹುಡುಗರನ್ನು ಹಗಲೂ ರಾತ್ರೆಯೂ ಗೋಳು ಹೊಯ್ದುಕೊಲ್ಳುತ್ತಿದ್ದಳು. ಜನರು ರಘುಮಹಾರಾಜನ ಬಳಿಗೆ ದೂರನ್ನು ಕೊಟ್ಟರು. ರಾಜನು ತನ್ನ ಪುರೋಹಿತನನ್ನು ಕರೆಯಿಸಿ ಕೇಳಿದಾಗ, ಅವಳೊಬ್ಬಳು ರಾಕ್ಷಸಿಯೆಂದೂ, ಮಾಲಿನ್ ಎಂಬವನ ಮಗಳೆಂದೂ, ದೇವತೆಗಳಿಂದಾಗಲಿ ಮನುಷ್ಯರಿಂದಾಗಲಿ, ಶಸ್ತç, ಶೀತ, ಉಷ್ಣ, ಮಳೆಗಳಿಂದಾಗಲಿ ಮರಣವಿಲ್ಲದಂತೆ ಶಿವನಿಂದ ವರವನ್ನು ಪಡೆದವಳೆಂದೂ ಪುರೋಹಿತನಿಂದ ತಿಳಿಯುತ್ತದೆ. ಚೇಷ್ಟೆ ಮಾಡುತ್ತ ಹೋಗುವ ಹುಡುಗರಿಂದಲೇ ಅವಳ ಜೀವಕ್ಕೆ ಅಪಾಯವೆಂದು ಕೂಡ ಶಿವನೇ ಹೇಳಿದ್ದನಂತೆ. ಆದುದರಿಂದ ಪುರೋಹಿತನು ಅವಳ ಮರಣಕ್ಕೆಂದು ಒಂದು ಸಲಹೇ ಸೂಚಿಸುತ್ತಾನೆ. ‘ಫಾಲ್ಗುಣ ಪೂರ್ಣಿಮೆಯಂದು ಶೀತ ಹೋಗಿರುತ್ತದೆ, ಬೇಸಗೆ ಶುರುವಾಗುತ್ತದೆ; ಜನರು ನಗುತ್ತಾ ವಿನೋದದಿಂದಿರಲಿ; ಕೈಯಲ್ಲಿ ಕಟ್ಟಿಗೆಗಳನ್ನು ಹಿಡಿದು ಒಳ್ಳೆಯ ಸಂಭ್ರಮದಿAದ ಹುಡುಗರು ಮನೆಗಳ ಹೊರಗೆ ಹೊರಡಲಿ; ಮರದ ತುಂಡುಗಳನ್ನೂ ಕಡ್ಡಿಗಳನ್ನೂ ಒಟ್ಟಿ ರಾಶಿಮಾಡಲಿ; ಅದಕ್ಕೆ ಬೆಂಕಿ ಹಚ್ಚಿ ರಕ್ಷೆÆÃಘ್ನ ಮಂತ್ರಗಳನ್ನು ಹೇಳಲಿ; ಬೆಂಕಿಯನ್ನು ಮೂರು ಸಲ ಪ್ರದಕ್ಷಿಣೆ ಮಾಡಿ, ನಗುತ್ತಾ, ಹಾಡುತ್ತಾ, ತಮ್ಮ ಮಾತೃಭಾಷೆಯಲ್ಲಿ ಬಾಯಿಗೆ ಬಂದ ಶಬ್ದಗಳನ್ನು ಜೋರಾಗಿ ಹೇಳುತ್ತಾ ಅಟ್ಟಹಾಸಗಳಿಂದಲೂ ಹೋಮದಿಂದಲೂ ರಾಕ್ಷಸಿ ತಾನೇ ಸಾಯುವಂತೆ ಮಾಡಲಿ.' ಎನ್ನುತ್ತಾರೆ. ಅದರಂತೆ ರಾಜನು ಅದನ್ನೆಲ್ಲ ಮಾಡಿಸಿದನು. ಈ ಕಾರಣದಿಂದ ರಾಕ್ಷಸಿಯು ಸತ್ತಳು. ಅಂದಿನಿAದ ಈ ದಿನಕ್ಕೆ ‘ಅಡಾಡಾ' ಮತ್ತು ‘ಹೋಲಿಕಾ' ಎಂಬ ಹೆಸರುಗಳು ಬಂದವು. ಇದಾದ ಮೇಲೆ ಮಾರನೆಯ ದಿನ, ಪ್ರತಿಪದೆಯಂದು ಜನರು ಬೆಂಕಿಯ ಬೂದಿಯನ್ನು ತೆಗೆದು ನಮಸ್ಕರಿಸಬೇಕು. ಮತ್ತು ಮನೆಯ ಅಂಗಳದ ಒಂದು ಚೌಕದಲ್ಲಿ ಕಾಮನ ಪೂಜೆಯನ್ನು ಮಾಡಬೇಕು; ಆ ಚೌಕದ ನಡುವೆ ಒಂದು ಆಸನ; ಅದರ ಎದುರಿಗೆ ಗಂಧ, ಅಕ್ಷತೆ, ಹಸಿರೆಲೆಗಳಿಂದ ಅಲಂಕೃತವಾದ ಪೂರ್ಣ ಕಲಶವನ್ನಿಡಬೇಕು. ಕೃಷ್ಣನ ಮೂರ್ತಿಗೆ ಸುಮಂಗಲಿಯೊಬ್ಬಳು ಗಂಧವನ್ನು ಸಮರ್ಪಿಸಿ ಹಚ್ಚಬೇಕು. ಆಮೇಲೆ ಯಜಮಾನನಿಗೆ ಪೂಜೆ ಮಾಡಿದವನು ಗಂಧಮಿಶ್ರಿತವಾದ ಮಾವಿನ ಚಿಗುರನ್ನು ತಿನ್ನಿಸಬೇಕು. ಆಮೇಲೆ ಬ್ರಾಹ್ಮಣರು, ಗಾಯಕರು ಮುಂತಾದವರಿಗೆಲ್ಲ ಯಥಾಶಕ್ತಿ ದಾನಗಳನ್ನು ಮಾಡಬೇಕು ಎಂದು ಹೇಳುತ್ತಾನೆ. ಬಂಗಾಲದಲ್ಲಿ ಇದನ್ನು ‘ದೋಲ-ಯಾತ್ರೆ'ಎಂದು ಆಚರಿಸಲಾಗುತ್ತದೆ. ಇದರ ಕುರಿತಾಗಿಯೇ ದೋಲಯಾತ್ರಾ ವಿವೇಕವೆಂಬ ಒಂದು ಸಣ್ಣ ಕೃತಿಯನ್ನು ಶೂಲಪಾಣಿಯೆಂಬವನು ರಚಿಸಿದ್ದಾನೆ.
ಈ ಹಬ್ಬವು ಬಹಳ ಪ್ರಾಚೀನ. ಮೊತ್ತ ಮೊದಲಿಗೆ ಇದರ ಹೆಸರು ಹೋಲಾಕಾ ಎಂದಿತ್ತು; ಪೂರ್ವ ಮೀಮಾಂಸಾ ಸೂತ್ರ (೧.೩.೧೫-೨೩)ದ ಮೇಲಿನ ಶಬರ ಭಾಷ್ಯದಲ್ಲಿ ಬರುವ ಉಲ್ಲೇಖಗಳನ್ನು ಗಮನಿಸಿದರೆ ಪ್ರಾಚೀನಕಾಲದಲ್ಲಿ ಈ ಹಬ್ಬವು ಭಾರತದ ಪೂರ್ವ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತವಿದ್ದಂತೆ ತೋರುತ್ತದೆ. ಕಾಠÀಕ ಗೃಹ್ಯಸೂತ್ರ ೭೩.೧ರಲ್ಲಿ 'ರಾಕಾ ಹೋಲೋಕೇ' ಎಂಬ ಸೂತ್ರವಿದೆ; ವ್ಯಾಖ್ಯಾನಕಾರನಾದ ದೇವಪಾಲನು ಇದನ್ನು 'ಸ್ತಿçÃಯರ ಸೌಭಾಗ್ಯಕ್ಕಾಗಿ ಆಚರಿಸಲ್ಪಡುವ ಕರ್ಮವಿಶೇಷವೇ ಹೋಲಾ, ಆ ಕರ್ಮದಲ್ಲಿ ರಾಕಾ (ಪೂರ್ಣಚಂದ್ರ) ದೇವತೆ'. ಎಂದು ವಿವರಿಸಿದ್ದಾನೆ. ಭಾರತದ ದೇಶವ್ಯಾಪಿಯಾಗಿ ಹಾಗೂ ಪ್ರಾದೇಶಿಕ ವಾಗಿ ಆಚರಿಸುವ ಇಪ್ಪತ್ತು ಕ್ರೀಡೆಗಳನ್ನು ವಾತ್ಸಾಯನನು ತನ್ನ ಕಾಮಸೂತ್ರದಲ್ಲಿ೨ ಯಕ್ಷರಾತ್ರಿಃ ಕೌಮುದೀ ಜಾಗರಃ ಸುವಸಂತಕಃ ಮದನೋತ್ಸವಃ . . . ಹೋಲಕಾ. . .ಎಂದು ಹೆಸರಿಸಿದ್ದಾನೆ; ಇವುಗಳಲ್ಲಿ 'ಹೋಲಿಕಾ' ಎಂಬುದೂ ಸಹ ಒಂದಾಗಿದೆ; ಇದನ್ನು ಜಯಮಂಗಳಾ ವ್ಯಾಖ್ಯಾನದಲ್ಲಿ ಫಾಲ್ಗುಣ ಶುದ್ಧಪೂರ್ಣಿಮೆಯಂದು ಜನರು ಪರಸ್ಪರವಾಗಿ ಕೊಂಬು ಇತ್ಯಾದಿಗಳಿಂದ ಬಣ್ಣಬಣ್ಣದ ನೀರನ್ನು ಚುಮುಕಿಸುತ್ತಾ, ಗಂಧಚೂರ್ಣಗಳನ್ನು ಎರಚಾಡುತ್ತಾ ಮಾಡುವ ವಿನೋದವೇ ಹೋಲಾಕಾ ಎಂದು ಹೇಳಲಾಗಿದೆ. ಹೇಮಾದ್ರಿಯು ಬೃಹದ್ಯಮವಚನವೊಂದನ್ನು ಉಲ್ಲೇಖಿಸಿದದ್ದಾನೆ. ಅದರಲ್ಲಿ ಹೋಳಿ ಹುಣ್ಣಿಮೆಯನ್ನು ‘ಹುತಾಶನೀ' ಎನ್ನಲಾಗಿದೆ. ಫಾಲ್ಗುಣ ಪೂರ್ಣಿಮೆಗೆ 'ಫಾಲ್ಗುನಿಕಾ' ಎಂದೂ ಕರೆಯುತ್ತಾರೆ; ಅದು ಬಾಲಕರಿಗೆ ಪ್ರಿಯವಾದ ಉಲ್ಲಾಸಕರ ಕ್ರೀಡೆಗಳಿಂದ ಕೂಡಿ ಜನರ ಐಶ್ವರ್ಯಕ್ಕೆ ಕಾರಣವಾಗುವದು. ವರಾಹಪುರಾಣದಲ್ಲಿ ‘ಪಟವಾಸವಿಲಾಸಿನಿ' ಎಂದು ಹೀಲಿಯನ್ನು ಕರೆಯಲಾಗಿದೆ. (ಬಣ್ಣದ ಚೂರ್ಣಗಳ ಎರಚಾಟದಿಂದ ಕೂಡಿರುವುದೆಂದರ್ಥ). ಹೇಮಾದ್ರಿಯು ಭವಿಷ್ಯೋತ್ತರಪುರಾಣದಲ್ಲಿನ ಪ್ರಕಾರ ಈ ಹಬ್ಬವನ್ನು ಐದು ಇಲ್ಲವೆ ಮೂರು ದಿನಗಳ ಕಾಲ ಆಚರಿಸಬಹುದು. ಫಾಲ್ಗುನ ಪೂರ್ಣಿಮೆಗೆ ಮುಂಚೆ ಚತುರ್ದಶಿಯಂದೇ ರಾತ್ರೆಯು ಆರಂಭವಾಗುವಾಗ ಮಂಡಪದ ಪೂರ್ವದಿಕ್ಕಿಗೆ ಅಗ್ನಿಯ ಉತ್ಸವವನ್ನು ನೆರವೇರಿಸಬೇಕು. ಆಮೇಲೆ ಗೋವಿಂದನ ಒಂದು ಮೂರ್ತಿಯನ್ನು ಮಾಡಿಸಿ, ಅದನ್ನು ಹದಿನಾರು ಕಂಭಗಳುಳ್ಳ ಮಂಟಪದಲ್ಲಿ ಒಂದು ವೇದಿಕೆಯ ಮೇಲೆ ಪ್ರತಿಷ್ಠೆ ಮಾಡಬೇಕು; ಅದಕ್ಕೆ ಪಂಚಾಮೃತಸ್ನಾನ, ಮುಂತಾದ ಸೇವೆಗಳನ್ನೆಲ್ಲ ಸಲ್ಲಿಸಿ, ಮೂರ್ತಿಯನ್ನಿಟ್ಟಿರುವ ಉಯ್ಯಾಲೆಯನ್ನು ಏಳು ಸಲ ತೂಗಬೇಕು. ಮೊದಲನೆಯ ದಿನ ಸ್ಥಾಪಿಸಲಾದ ಅಗ್ನಿಯನ್ನೇ ಉತ್ಸವ ಮುಗಿಯುವವರೆಗೂ ಕಾಯ್ದುಕೊಂಡು ಇರಬೇಕು. ಉತ್ಸವದ ಸಮಾಪ್ತಿಕಾಲದಲ್ಲಿ ಉಯ್ಯಾಲೆಯನ್ನು ಇಪ್ಪತ್ತೊಂದು ಸಲ ತೂಗಬೇಕು. ರಾಜನಾದ ಇಂದ್ರದ್ಯುಮ್ನನು ಈ ದೋಲ-ಮಹೋತ್ಸವವನ್ನು ವೃಂದಾವನದಲ್ಲಿ ಆರಂಭಿಸಿದನೆAದು ಹೇಳಲಾಗಿದೆೆ. ಈ ಉತ್ಸವದ ಫಲವಾಗಿ ಮನುಷ್ಯನು ಪಾಪಮುಕ್ತನಾಗುವನು ಎಂದು ಬರುತ್ತದೆ.
ಜೈಮಿನಿ ಮತ್ತು ಕಾಠಕಗೃಹ್ಯಸೂತ್ರಗಳಲ್ಲಿ ಹೋಲಾಕಾ ಎಂಬ ನಿರ್ದೇಶ ಬಂದಿರುವುದರಿAದ ಈ ಹಬ್ಬವು ಶಕ ಪೂರ್ವದಲ್ಲಿ ಕೆಲವು ಶತಮಾನಗಳಷ್ಟಾದರೂ ಹಿಂದೆಯೇ ಆಚರಣೆಯಲ್ಲಿದ್ದಿರಬೇಕೆಂದು ಖಚಿತವಾಗುತ್ತದೆ. ಕಾಮಸೂತ್ರ ಮತ್ತು ಭವಿಷ್ಯೋತ್ತರಪುರಾಣಗಳು ಇದನ್ನು ವಸಂತದೊಡನೆ ಗಂಟುಹಾಕುತ್ತವೆ ಯಾಕೆಂದರೆ ಪೌರ್ಣಮಾಂತ್ಯಮಾಸಾಚರಣೆಯ ಉತ್ತರಕ್ಕೆ ಸಮಾನಗಿದೆ ಎನ್ನುವ ಕಾರಣ ಗಮನಿಸಬೇಕು. ಅದೇನೇ ಇರಲಿ ಹೋಲಿ ಆಚರಣೆಯಿಂದ ಇಂದು ಸಮಗ್ರ ಭಾರತದಲ್ಲಿ ಏಕತೆಯನ್ನು ಸಾರುವುದಕ್ಕೆ ಸಾದ್ಯವಂತೂ ಆಗುತ್ತದೆ.
ಲೇಖಕರು: ಸದ್ಯೋಜಾತ ಭಟ್
ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ