🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಆಲೆಮನೆ ಬೆಲ್ಲ ಆಲೆಮನೆ ಬೆಲ್ಲ ಏನಿದು ?

ಬಹಳಷ್ಟು ಜನರು ನನಗೆ ವೈಯಕ್ತಿಕವಾಗಿ ಫೋನ್ ಮೂಲಕ ಈ ಶಬ್ದದ ಬಗ್ಗೆ ಪ್ರಶ್ನೆಗಳು ಕೇಳಿದ್ದಿದೆ. ಅಂತ ನೀವು ಕಾಯಂ ಹೇಳುತ್ತಾ ಇರುತ್ತೀರಲ್ಲ ತೆಳು ಬೆಲ್ಲ, ಅಲೆಮನೆ ಬೆಲ್ಲ ಹಾಗು ಜೊನಿ ಬೆಲ್ಲ ಈ ಎಲ್ಲಾ ಶಬ್ದಗಳದ್ದು ಅರ್ಥ ಏನು ಅಂತ ?

ಆಲೆಮನೆ ಬೆಲ್ಲ ಅಂದರೆ ರೈತ ಕಬ್ಬನ್ನು ಬೆಳೆಸಿ ಪೂರ್ಣ ಬೆಳವಣಿಗೆ  ಪೂರ್ಣ ಆದ ನಂತರ ಅದರಿಂದ ಕಬ್ಬಿನ ರಸವನ್ನು ತೆಗೆದು ಅದನ್ನು ಕುದಿಸಿ, ಬತ್ತಿಸಿ ಅದು ಅದರ ಪಾಕ ಆದ ನಂತರ ತಯಾರಾಗುವುದೇ ಅಲೆಮನೆ ಬೆಲ್ಲ. ಕೆಲವು ಅಲೆಮನೆ ಬೆಲ್ಲದ ತಜ್ಞರ ಪ್ರಕಾರ ಹೆಚ್ಚಿನ ಶಾಖ ಅಂದರೆ ನಿರಂತರವಾಗಿ ಹೆಚ್ಚಿನ ಉಷ್ಣಾಂಶದಲ್ಲಿ ತಯಾರಾದಂತಹ ಬೆಲ್ಲ ಉತ್ತಮ ಬಾಳಿಕೆ ಬರುವುದು ಎಂಬ ಅಭಿಪ್ರಾಯ ಇದೆ. ಈ ಆಲೆಮನೆ ಬೆಲ್ಲದ ಅಡಿಗೆ ಆಯ್ತು ಪಾಕ ಸರಿಯಾಗಿದೆ ಎಂದು ನೋಡುವುದೇ ಒಂದು ವಿಶೇಷ ತಜ್ಞತೆ ಮತ್ತು ಕಲೆ. ಇದಕ್ಕೆ ಸರಿಯಾದ ಅನುಭವ ಅವಶ್ಯಕತೆ ಇದೆ. ಹೆಚ್ಚಿನ ತಜ್ಞರು ಇದರ ಪರೀಕ್ಷೆಯಲ್ಲ ಒಂದು ಪ್ಲೇಟ್ ನಲ್ಲಿ ನೀರನ್ನು ಹಾಕಿ ಬೆಲ್ಲವನ್ನು ಸ್ವಲ್ಪ  ಹಾಕುತ್ತಾರೆ ಅದು ಕೂಡಲೇ ತಳ ಸೇರಿ ನೀರಿನಲ್ಲಿ ಬೆರೆತರೆ ಇನ್ನೂ ಪಾಕ ಆಗಿಲ್ಲ ಎಂದು ಅರ್ಥ. ತಳ ಸೇರಿ ಕೂಡಲೇ ನೀರಿನಲ್ಲಿ ಬೆರೆಯದೆ ಇದ್ದರೆ ಪಾಕ ಆಗಿದೆ ಎಂದು ಅರ್ಥ. ಈ ರೀತಿ ಆದಂತಹ  ಬೆಲ್ಲ ಹೆಚ್ಚಿನ ದಿನ ಬಾಳಿಕೆ ಬರುತ್ತದೆ. ಹೀಗೆ ಒಂದು ವೈಜ್ಞಾನಿಕ ವಿಚಾರವನ್ನು ಈ ಬಗ್ಗೆ ತಜ್ಞರಲ್ಲಿ ವಿಚಾರಿಸಿದಾಗ ಕಬ್ಬಿನ ಹಾಲು ಕುದಿಯಲು ಇಟ್ಟಿದ್ದು ಸರಿ ಸುಮಾರು 108 ಡಿಗ್ರಿ ಸೆಂಟಿಗ್ರೇಡುವರೆಗೆ ತಲುಪಿದಾಗ ಉತ್ತಮ ಬಾಳಿಕೆ ಬರುವಂತಹ ಬೆಲ್ಲದ ಪಾಕ ತಯಾರಾಗುತ್ತದೆ ಎಂದು. ತಯಾರಿಸಿದ ಬೆಲ್ಲ ಹಲವು ದಿನ ಬಾಳಿಕೆ ಬರುವುದು ಅತ್ಯಂತ ಮಹತ್ವದ್ದು. ಹೆಚ್ಚಿನ ರಾಸಾಯನಿಕ ಗೊಬ್ಬರ ಹಾಕಿ ಬೆಳೆಸಿದ ಕಬ್ಬು ಇದರಿಂದ ತಯಾರಿದಂತಹ ಬೆಲ್ಲ ಒಂದು ವರ್ಷದವರೆಗೆ ಬಾಳಿಕೆ  ಬರುವುದಿಲ್ಲ. ಈ ರೀತಿಯಾಗಿ ಉತ್ತಮ ಶಾಖನಿರ್ವಹಣೆ, ಸರಿಯಾದ ಕುದಿಸುವಿಕೆ, ಸರಿಯಾದ ಸಂಪೂರ್ಣವಾಗಿ ಬೆಳೆದಂತಹ ಕಬ್ಬಿನಿಂದ  ತಯಾರಿಸಿದ ಬೆಲ್ಲ ಆಲೆಮನೆಬೆಲ್ಲ ಎಂದು ಕರೆಯಬಹುದಾಗಿದೆ. ಈ ರೀತಿಯಾಗಿ ತಯಾರಿಸಿದ ಬೆಲ್ಲ ಆಲೆಮನೆಬೆಲ್ಲ ಎಂದು ಕರೆಸಿಕೊಂಡು ಇದು ಔಷದೀಯ ಪರಿಣಾಮಗಳನ್ನು ಮಾಡುತ್ತದೆ. ಮುಖ್ಯವಾಗಿ ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಿಸಲು ಅತ್ಯಂತ ಸುಲಭದ ರುಚಿಕರ ಉಪಾಯ ಇದಾಗಿದೆ. ಹಿಮೋಗ್ಲೋಬಿನ್ ಅಂಶ ರಕ್ತದಲ್ಲಿ ಸರಿಯಾದ ಪ್ರಮಾಣದಲ್ಲಿ ಇರುವುದು ಅವನ ಆರೋಗ್ಯ ಚೆನ್ನಾಗಿರಲು ಸಹಾಯ ಮಾಡುತ್ತದೆ. ಅವಶ್ಯಕ ವೈದ್ಯಕೀಯ ಸಲಹೆಯೊಂದಿಗೆ ಈ ಆಲೆಮನೆ ಬೆಲ್ಲವನ್ನು ನಿರಂತರವಾಗಿ ಸೇವಿಸಿದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗುವುದರಲ್ಲಿ ಯಾವುದೇ ರೀತಿಯ ಅನುಮಾನವೇ ಇಲ್ಲ.

ಈ ಮೇಲಿನ ಸಂಗತಿಯನ್ನು ಹೇಳುತ್ತಿರುವಾಗ ನನ್ನ ತಲೆಯಲ್ಲಿ ಬಂದಂತಹ ಒಂದು ಉತ್ತಮ ಉದಾಹರಣೆ ಈ ಮುಂದಿನಂತೆ ಹಾವೇರಿ ಜಿಲ್ಲೆಯ ವೈದ್ಯರೊಬ್ಬರಿಗೆ ಹೀಗೆ ನಮ್ಮ ಮನೆಗೆ ಬಂದಾಗ ಮಾತನಾಡುತ್ತಾ ಆಲೆಮನೆ ಬೆಲ್ಲದ ಮಹತ್ವವನ್ನು ಅವರಿಗೆ ಹೇಳಿದ್ದೆ ಹಾಗೂ ನಮ್ಮ ಮನೆಯಲ್ಲಿ ತಿಂಡಿಯ ಜೊತೆಗೆ ಆಲೆಮನೆ ಬೆಲ್ಲವನ್ನು, ಆಲೆಮನೆ ಬೆಲ್ಲದ  ರುಚಿ ತೊರಿಸಿದ್ದೆ, ನಾನು ಹೇಳಿದ ಗುಣಗಳ ಮೇಲೆ ಅವರಿಗೆ  ಸಣ್ಣ ಅನುಮಾನ ಇತ್ತು ಅವರು ಅವರಲ್ಲಿ  ಹಿಮೋಗ್ಲೋಬಿನ್ ಕಡಿಮೆಯಾಗಿ ಔಷಧಿ  ಉಪಚಾರಕ್ಕೆ ಬಂದಂತಹ ಕೆಲವು ರೋಗಿಗಳಿಗೆ ಪರೀಕ್ಷೆಯನ್ನು ಮಾಡಿಸಿ ಆನಂತರ ಶಿರಸಿಯಿಂದ ಅಲೆಮನೆಬೆಲ್ಲವನ್ನ ತರಿಸಲು ಅಜ್ಞಾಪಿಸಿದರು ಹಾಗೂ ಸೇವಿಸಲು ನಿರ್ದೇಶನ ನೀಡಿದರು ಮತ್ತೆ ಪುನಃ ತಿಂಗಳ ನಂತರ ರಕ್ತದಲ್ಲಿಯ ಹಿಮೋಗ್ಲೋಬಿನ್ ಪರೀಕ್ಷಿಸಲು ಹೇಳಿದರು ಆಗ ಅದು ಗಣನೀಯ ಪ್ರಮಾಣದಲ್ಲಿ ಹೆಚ್ಚಿಗೆಯಾಗಿದ್ದು ಅವರ ಗಮನಕ್ಕೆ ಬಂತು, ಮತ್ತು ಅವರ ತಲೆಯಲ್ಲಿದ್ದ ಅನುಮಾನ ದೂರವಾಯಿತು. ಅದರಂತೆ ನನಗೂ ತಿಳಿಸಿ ನಾನು ಹೇಳಿದ ಮಾಹಿತಿಯನ್ನು ಪರೀಕ್ಷಿಸಿದ ಬಗ್ಗೆ ಹೇಳಿದರು.

ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ
 ಲೇಖಕರು: ಡಾ ರವಿಕಿರಣ ಪಟವರ್ಧನ ಶಿರಸಿ