ಅಂಧಗಜ ನ್ಯಾಯ
" ಕುರುಡರು ಮತ್ತು ಆನೆಯ ನ್ಯಾಯ"
"ಕುರುಡರು ಆನೆ ಮುಟ್ಟಿದಂತೆ" ಎಂಬ ಗಾದೆ ಇದೆ.
ಇದಕ್ಕೆ ಸಂಬಂಧಿಸಿದಂತೆ ಒಂದು ಕಥೆ ಬಹಳ ಒಳ್ಳೆಯ ಪ್ರಸಿದ್ಧಿ ಯನ್ನು ಹೊಂದಿದೆ.
ಒಮ್ಮೆ ಕುರುಡರು ಆನೆ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಆಸೆಯಿಂದಾಗಿ ಆನೆಯನ್ನು ಮುಟ್ಟಿ ನೋಡಿದರು. ಒಬ್ಬನು ಸೊಂಡಿಲನ್ನು ಮುಟ್ಟಿ ಆನೆ ಹಾವಿನಂತೆಯೂ, ಮತ್ತೊಬ್ಬನು ಕಿವಿಯನ್ನು ಮುಟ್ಟಿ ಆನೆಯು ಮೊರದಂತೆಯೂ, ಇನ್ನೊಬ್ಬ ಕಾಲನ್ನು ಮುಟ್ಟಿ ಕಂಬದಂತಿದೆಯೆಂದು ಊಹಿಸಿದರು. ಆದರೆ ಅದು ಆನೆಯ ಪರಿಪೂರ್ಣ ಆಕೃತಿ ಅಲ್ಲ.
ಯಾವುದೇ ಒಂದು ವಿಷಯವನ್ನು ಸರಿಯಾಗಿ ತಿಳಿದುಕೊಳ್ಳದೇ ನಮ್ಮ ಸಾಮರ್ಥ್ಯದ ನೇರಕ್ಕೆ ಮಾತ್ರ ಯೋಚಿಸಿದರೆ ಅದು ಪರಿಪೂರ್ಣ ಎನಿಸಿಕೊಳ್ಳುವುದಿಲ್ಲ. ಅದರಿಂದ ಪರಸ್ಪರ ಜಗಳ ಹುಟ್ಟುವುದು. ಅವರು ತಿಳಿದುಕೊಂಡಿರುವುದು ಕೆಲವು ಅಂಶದಲ್ಲಿ ಸರಿ, ಕೆಲವು ಅಂಶಗಳಲ್ಲಿ ತಪ್ಪು ಅವರ ಜಗಳ ಅವಿವೇಕದಿಂದುಂಟಾಗಿರುತ್ತದೆ.
ಈ ಅರ್ಧಸತ್ಯದ ಆವಿಷ್ಕಾರದಿಂದ ನಾನೇ ಸರ್ವಜ್ಞ ಎಂದು ಕೊಳ್ಳುವವರಿಗೆ ಈ ಅಂಧಗಜ ನ್ಯಾಯ ಅನವಯವಾಗುತ್ತದೆ.
ಲೇಖನ - ಶ್ರೀಮತಿ ಪ್ರತಿಮಾ ಹೆಗಡೆ.
ಪ್ರಸರಣ- ಶ್ರೀ ಸ್ವರ್ಣವಲ್ಲೀ ಭಕ್ತವೃಂದ.
1.jpg)